ಭಾರತೀಯ ವಿದ್ಯಾಭವನದಲ್ಲಿ ನಾಟಕ ಪ್ರದರ್ಶನ

neenasam
Published on

ಮಡಿಕೇರಿ:

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಜ. 22 ಮತ್ತು ಜ. 23 ರಂದು ಮಡಿಕೇರಿಯಲ್ಲಿ ನೀನಾಸಂ ತಿರುಗಾಟದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನಗರದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ (ಶ್ರೀ ಓಂಕಾರೇಶ್ವರ ದೇವಾಲಯ ಬಳಿ) ಜ. 22 ರಂದು ಬುಧವಾರ ಸಂಜೆ 6.30ಕ್ಕೆ ನೀನಾಸಂ ತಿರುಗಾಟದ ಅಂಗವಾಗಿ ವಿದ್ಯಾನಿಧಿ ವನಾರಸೆ (ಪ್ರಸಾದ್) ನಿರ್ದೇಶನದ ಅಂಕದ ಪರದೆ ಎಂಬ ನಾಟಕ ( ರಚನೆ:ಮರಾಠಿ ಮೂಲ: ಅಭಿರಾಮ್ ಭಡ್ಕಮಕರ್, ಕನ್ನಡಕ್ಕೆ: ಜಯಂತ ಕಾಯ್ಕಿಣಿ ) ಪ್ರದರ್ಶನಗೊಳ್ಳಲಿದೆ. ಜ. 23 ರಂದು ಗುರುವಾರ ಸಂಜೆ 6.30ಕ್ಕೆ 'ಮಾಲತೀ ಮಾಧವ' (ಮೂಲ ರಚನೆ: ಭವಭೂತಿ, ಕನ್ನಡ ರೂಪ ಮತ್ತು ನಿರ್ದೇಶನ: ಅಕ್ಷರ ಕೆ. ವಿ.) ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದು ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net