ನೀಲಕಂಠೇಶ್ವರ ಸೊಸೈಟಿ 17ನೇ ವಾರ್ಷಿಕ ಮಹಾಸಭೆ ಆಯೋಜನೆ

Neelkantheshwara Society 17th Annual General Meeting
ವಿಜಯಪುರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ನೀಲಕಂಠೇಶ್ವರ ಕೋ ಆಫ್​ ಕ್ರೆಡಿಟ್​ ಸೊಸೈಟಿಯ ವಾರ್ಷಿಕ ಮಹಾಸಭೆಯು ನಡೆಯಿತು. ಕಿರಣ ಹೊಟಗಿ, ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಭೀಮನಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ : ನಗರದ ನೀಲಕಂಠೇಶ್ವರ ಕೋ ಆಫ್​ ಕ್ರೆಡಿಟ್​ ಸೊಸೈಟಿಯ 2023&24 ನೇ ಸಾಲಿನ 17 ನೇ ವಾರ್ಷಿಕ ಮಹಾಸಭೆಯು ಇಲ್ಲಿನ ಇಂಡಿ ರಸ್ತೆಯ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ನಡೆಯಿತು.

ನಾಗಠಾನದ ಉದಯೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೇವರಹಿಪ್ಪರಗಿ ೇತ್ರದ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ, ರಾಜಕೀಯ ಧುರೀಣರಾದ ಸೋಮನಗೌಡ (ಅಪ್ಪುಗೌಡ) ಪಾಟೀಲ, (ಮನಗೂಳಿ), ಅನಿಲ ಕುಮಾರ ಬಿರಾದಾರ, ಬಿಎಲ್​ಡಿ ಸಂಸ್ಥೆಯ ಆಡಳಿತಾಧಿಕಾರಿ ಐ.ಎಸ್​. ಕಾಳಪ್ಪನವರ ಹಾಗೂ ಸಂದ ಅಧ್ಯ ಕಿರಣ ಹೊಟಗಿ, ಉಪಾಧ್ಯ ಅಶೋಕ ಬಣ್ಣದ, ನಿರ್ದೇಶಕರಾದ ಎಂ.ವಿ. ಕಿಟ್ಟಾ , ಶಾಖಾ ಸಲಹಾ ಸಮಿತಿ ಸದಸ್ಯ ನರಸಿಂಗ ಪ್ರಸಾದ ತಿವಾರಿ, ಸಂದ ಎಲ್ಲ ನಿರ್ದೇಶಕ ಮಂಡಳಿ, ಸದಸ್ಯರು ಸಿಬ್ಬಂದಿ ವರ್ಗದವರು ಮತ್ತಿತರರಿದ್ದರು.

ಶೈಲಾ ಅನಂತಪುರ ನಿರೂಪಿಸಿದರು. ನಿರ್ದೇಶಕ ಐ.ಜಿ. ಭಾವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net