

ರೋಣ: ತಾಲೂಕಿನ ಹುಲ್ಲೂರು ಗ್ರಾಪಂ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ನೀಲವ್ವ ಹನಮಂತಪ್ಪ ಅಬ್ಬಿಗೇರಿ ಹಾಗೂ ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಗುರಪ್ಪ ಹುಬ್ಬಳ್ಳಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ರವಿ ಎ.ಎನ್., ಕಾರ್ಯ ನಿರ್ವಹಿಸಿದರು. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ, ಅಶೋಕ ಗಟ್ಟಿ, ಷಣ್ಮುಖಗೌಡ ಮೆಣಸಗಿ, ರೇಣುಕಾ ಪೂಜಾರ, ಬಸವರಾಜ ಬ್ಯಾಳಿ, ಮುದಕಪ್ಪ ಅಡ್ನೂರ, ರೇಣುಕಾ ಗಾಣಿಗೇರ, ಯಲ್ಲಪ್ಪಗೌಡ ಕೆಂಚನಗೌಡ್ರ, ಬಸವರಾಜ ಅವರಾಧಿ, ನಂದಾ ಬರಡ್ಡಿ, ಶಾಂತವ್ವ ಅನವಾಲದ, ಯಚ್ಚರಪ್ಪ ಅಬ್ಬಿಗೇರಿ, ರುದ್ರಪ್ಪ ನವಲಗುಂದ, ನಿಂಗನಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.