

ನರಗುಂದ: ಇಲ್ಲಿನ ಪುರಸಭೆ ಕೊನೇ ಅವಧಿಗೆ ಅಧ್ಯಕ್ಷೆಯಾಗಿ ನಿರೀಕ್ಷೆಯಂತೆ 15ನೇ ವಾರ್ಡ್ನ ನೀಲಮ್ಮ ಪವಾಡೆಪ್ಪ ವಡ್ಡಿಗೇರಿ ಗುರುವಾರ ಅವಿರೋಧವಾಗಿ ಆಯ್ಕೆಗೊಂಡರು.
ಅಧ್ಯಕ್ಷ ಸ್ಥಾನಕ್ಕೆ ನೀಲಮ್ಮ ವಡ್ಡಿಗೇರಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಶ್ರೀಶೈಲ ತಳವಾರ ಅವಿರೋಧ ಆಯ್ಕೆ ಘೊಷಿಸಿದರು.
ಶಾಸಕ ಸಿ.ಸಿ. ಪಾಟೀಲ ನೂತನ ಅಧ್ಯಕ್ಷೆ ನೀಲಮ್ಮ ಅವರನ್ನು ಸನ್ಮಾನಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಪುರಸಭೆ ಉಪಾಧ್ಯಕ್ಷೆ ಕಾಶವ್ವ ಮಳಗಿ, ಸದಸ್ಯರಾದ ಸುನೀಲ ಕುಷ್ಟಗಿ, ಮಂಜುಳಾ ಪಟ್ಟಣಶೆಟ್ಟಿ, ಎಚ್.ಎನ್. ಗೋಟೂರ, ಪ್ರಶಾಂತ ಜೋಶಿ, ರಾಜೇಶ್ವರಿ ಹವಾಲ್ದಾರ, ಅನ್ನಪೂರ್ಣಾ ಯಲಿಗಾರ, ರೇಣುಕಾ ಕಲಾರಿ, ಕವಿತಾ ಅರ್ಭಣದ, ರಜೀಯಾಬೇಗಂ ತಹಸೀಲ್ದಾರ್, ಭಾವನಾ ಪಾಟೀಲ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ದೇವಣ್ಣ ಕಲಾಲ, ಉಮೇಶ ಯಳ್ಳೂರ, ಹಸನ ನವದಿ, ಉಮೇಶಗೌಡ ಪಾಟೀಲ, ಈರಣ್ಣ ವಡ್ಡಿಗೇರಿ, ಅನೀಲ ಧರೆಯಣ್ಣವರ, ಸಿದ್ದೇಶ ಹೂಗಾರ, ನಾಗರಾಜ ನೆಗಳೂರ, ಹಸನಸಾಬ್ ತಹಸೀಲ್ದಾರ್, ಸಿದ್ದಪ್ಪ ಯಲಿಗಾರ, ವಿಠಲ ಹವಾಲ್ದಾರ, ಶಿವಾನಂದ ಮುತವಾಡ, ಬಸವರಾಜ ಮಳಗಿ, ಶ್ರೀಕಾಂತ ನರಗುಂದ, ಪವಾಡೆಪ್ಪ ವಡ್ಡಿಗೇರಿ, ಇತರರಿದ್ದರು.