ನೀಲಕಂಠ ಮಠದಲ್ಲಿ 26ನೇ ವರ್ಷದ ವರ್ಧಂತಿ ರಜತ ಮಹೋತ್ಸವ

23GDG03
ಬೆಟಗೇರಿ ನೀಲಕಂಠ ಮಠದಲ್ಲಿ ಏರ್ಪಡಿಸಿದ್ದ ಮೂಲ ಪೀಠಾಧೀಶ್ವರರ 26ನೇ ವರ್ಷದ ವರ್ಧಂತಿ ಕಾರ್ಯಕ್ರಮವನ್ನು ನೀಲಕಂಠ ಪಟ್ಟದಾರ್ಯ ಶ್ರೀಗಳು ಉದ್ಘಾಟಿಸಿದರು. ಶಶಿಕಲಾ ನೀಲಕಂಠಪ್ಪ ಶ್ಯಾವಿ, ವಾಸು ತಿಮ್ಮಪ್ಪ ಜೋಗಿ, ರಾಜು ದೂಳಾ, ಲಕ್ಷಿ$್ಮ ಕಾಕಿ, ನಿಂಗಪ್ಪ ಚೇಗೂರ, ಪ್ರಭು ರೊಡ್ಡಾನವರ, ಚನ್ನಬಸಪ್ಪ ಹಿಂಡಿ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಬೆಟಗೇರಿ ನೀಲಕಂಠ ಮಠದಲ್ಲಿ ಶುಕ್ರವಾರ ಮೂಲ ಪೀಠಾಧೀಶ್ವರರ 26ನೇ ವರ್ಷದ ವರ್ಧಂತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೀಲಕಂಠ ಪಟ್ಟದಾರ್ಯ ಶ್ರೀಗಳು, ಸಮಾಜದ ಎಲ್ಲ ಜನರು ಮಠದ ಏಳ್ಗೆಗೆ ಶ್ರಮೀಸುತ್ತಿದ್ದಾರೆ. ದೇವರು ಜೀವನದಲ್ಲಿ ಪ್ರತಿ ಕೆಲಸಗಳಲ್ಲೂ ನಿಮಗೆ ಯಶಸ್ಸು ಕರುಣಿಸಲಿ. ನಮ್ಮ ಸಮಾಜದ ವ್ಯಕ್ತಿಗಳು ಚಿತ್ರರಂಗದಲ್ಲಿ, ರಾಜಕೀಯ ರಂಗದಲ್ಲಿ ಹಾಗೂ ಇನ್ನಿತರ ೇತ್ರದಲ್ಲಿ ಪ್ರಜ್ವಲಿಸಬೇಕು. ಸಮಾಜದ ಉನ್ನತಿಗೆ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದರು ಶ್ರೀಗಳು ಹೇಳಿದರು.
ಮಠದ ಇತಿಹಾಸ ಹಾಗೂ ನತೆ, ರಣೆ, ನಿರ್ವಹಣೆ, ಮಠದ ಜಿಣೋರ್ದ್ಧಾರ, ಕಲ್ಯಾಣ ಮಂಟಪ, ನೀಲಕಂಠೇಶ್ವರ ಮಠದ ಕಾಮಗಾರಿಯು ಮುಕ್ಕಾಲು ಭಾಗ ಮುಗಿದಿದ್ದು ಆದಷ್ಟು ಬೇಗನೆ ಲೋಕಾರ್ಪಣೆ ಮಾಡಲು ಇನ್ನೂ ಸ್ವಲ್ಪ ಆಥಿರ್ಕ ಅವಶ್ಯಕತೆಯಿದೆ. ತಾವೆಲ್ಲರೂ ಇಲ್ಲಿಯವರೆಗೆ ಸಹಾಕರ ನೀಡಿದ್ದಿರಿ. ಕಾಮಗಾರಿ ರ್ಪೂಣಗೊಳ್ಳಲು ತಮ್ಮ ಸಹಾಯ ಸಹಕಾರ ಅತ್ಯವಶ್ಯ. ಸಮಾಜದ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಸಮಾಜವನ್ನು ಉನ್ನತ ಸ್ಥಾನಕ್ಕೆ ತರುವ ಕೆಲಸವನ್ನು ನಾವು ನೀವೆಲ್ಲರೂ ಕೂಡಿ ಮಾಡಬೇಕು. ನಮ್ಮ ಸಮಾಜದ ಎಲ್ಲರೂ ಒಗ್ಗಟ್ಟಾಗುವ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.
ನೇಕಾರಿಕೆ ನಮ್ಮ ಮೂಲ ಕಸುಬು. ಅದನ್ನು ಕಡೆಗಣಿಸಬಾರದು. ಶ್ರೀಮಠದಲ್ಲಿ ಗುರುಭವನವನ್ನು ನಿಮಿರ್ಸಿ ವಿಧ್ಯಾಥಿರ್ಗಳಿಗೆ ಶಿಣವನ್ನು ನೀಡಬೇಕು. ಇಂದು ಉದ್ಘಾಟನೆಯಾದ ಮಹಿಳಾ ಸಂದ ಅಭಿವೃದ್ಧಿಗೆ ಸರ್ಕಾರದಿಂದ ಸವಲತ್ತು ಪಡೆಯಲು ಸಮಾಜದ ಜನರು ಶ್ರಮೀಸಬೇಕು.
ಶಶಿಕಲಾ ನೀಲಕಂಠಪ್ಪ ಶ್ಯಾವಿ, ವಾಸು ತಿಮ್ಮಪ್ಪ ಜೋಗಿ, ರಾಜು ದೂಳಾ, ಲಕ್ಷಿ$್ಮ ಕಾಕಿ, ನಿಂಗಪ್ಪ ಚೇಗೂರ, ಪ್ರಭು ರೊಡ್ಡಾನವರ, ಚನ್ನಬಸಪ್ಪ ಹಿಂಡಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net