

ಹನುಮಸಾಗರ: ಪ್ರತಿ ಮನೆ ಮನೆಗೂ ತೆರಳಿ ಪಡೆದ ಮಾಹಿತಿಯನ್ನು ಸಮೀಕ್ಷೆ ಆ್ಯಪ್‌ನಲ್ಲಿ ದಾಖಲು ಮಾಡಬೇಕು ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಕಾರ್ಯದ ಮೇಲ್ವಿಚಾರಣೆ ನಡೆಸಿ ಮಾತನಾಡಿದರು.
ಪ್ರತಿ ಮನೆಗೆ ತೆರಳಿ ಸರಿಯಾದ ಮಾಹಿತಿ ದಾಖಲು ಮಾಡಬೇಕು. ಕುಟುಂಬದ ಎಲ್ಲ ಸದಸ್ಯರ ಪೂರ್ಣ ಮಾಹಿತಿ ಪಡೆಯಬೇಕು.
ಕುಟುಂಬ ಸದಸ್ಯರ ಆಧಾರ ಹಾಗೂ ಪಡಿತರ ಚೀಟಿ ಪಡೆದು ಜನರ ಶೈಕ್ಷಣಿಕ ಮಟ್ಟ, ಆರ್ಥಿಕ ಸ್ಥಿತಿ, ಜಾತಿ, ಉಪಜಾತಿ, ಕೌಶಲ ಅಗತ್ಯತೆ ಮತ್ತು ಇತರೆ ಸಾಮಾಜಿಕ ಅಂಶ ಸೇರಿ ಸುಮಾರು 60 ಅಂಶಗಳನ್ನು ಆ್ಯಪ್‌ನಲ್ಲಿ ದಾಖಲು ಮಾಡಬೇಕು ಎಂದರು.