ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಆಗ್ರಹ

3
ಸಿಐಟಿಯು ಕಾಗವಾಡ ತಾಲೂಕು ಘಟಕದಿಂದ ಶಿರಸ್ತೆದಾರ ಅಶೋಕ ತಗಾರೆಗೆ ಮನವಿ ಸಲ್ಲಿಸಲಾಯಿತು. ಸುವರ್ಣಾ ಕಮತಗಿ, ಸುಮಿತ್ರಾ ಮುಗಳಿ, ಆಕಾಶಿನಿ ಗುಂಜಾಳೆ ಇತರರಿದ್ದರು.
Published on

ಕಾಗವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು ಎಂದು ಸಿಐಟಿಯುನ ಕಾಗವಾಡ ತಾಲೂಕು ಘಟಕದ ಅಧ್ಯಕ್ಷೆ ಸುವರ್ಣಾ ಕಮತಗಿ ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಕಾಗವಾಡ ತಾಲೂಕು ಘಟಕದ ನೇತೃತ್ವದಲ್ಲಿ ರೈತ, ಕೂಲಿಕಾರ ಕಾರ್ಮಿಕರಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ರೈತರ ಹೋರಾಟ ಹತ್ತಿಕುವ ಕೆಲಸ ಮಾಡುತ್ತಿದೆ. ದೆಹಲಿಯಲ್ಲಿ ರೈತರ ಮೇಲೆ ಲಾಠಿ ಪ್ರಹಾರ ಮಾಡಿಸುತ್ತಿದೆ. ಇದು ಖಂಡನೀಯ. ಜನರ ಶೋಷಣೆ ತಪ್ಪಿಸಬೇಕು, ಜನವಿರೋಧಿ ನೀತಿ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಶಿರಸ್ತೆದಾರ ಅಶೋಕ ತಗಾರೆ ಮನವಿ ಸಲ್ಲಿಸಿದರು. ಸಿಐಟಿಯುನ ಕಾಗವಾಡ ತಾಲೂಕಾಧ್ಯಕ್ಷೆ ಸುವರ್ಣಾ ಕಮತಗಿ, ಖಜಾಂಚಿ ಸುಮಿತ್ರಾ ಮುಗಳಿ, ಕಾರ್ಯದರ್ಶಿ ಆಕಾಶಿನಿ ಗುಂಜಾಳೆ, ಕಾರ್ಯಕರ್ತೆಯರಾದ ಸಾವಿತ್ರಿ ಕಾಂಬಳೆ, ಸೇವಂತಾ ಕಾಂಬಳೆ, ಶಾಂತಾ ವಡ್ಡರ, ತಾರಾಬಾಯಿ ಪಾಟೀಲ, ಛಾಯಾ ಕಲೂತಿ, ಸುರೇಖಾ ಚಿಂಚಲಿ, ರೂಪಾ ಸಲಗರ, ಸವಿತಾ ಹಿರೇಮಠ, ಸುಮನ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net