

ತ್ಯಾಗರ್ತಿ: ಸಾಗರ ತಾಲೂಕಿನ ನೀಚಡಿ ಚೌಡಿಕೆರೆ ಕೆರೆ ನಿರ್ವಹಣಾ ಸಮಿತಿಗೆ ಅತ್ಯುತ್ತಮ ಕೆರೆ ಸಮಿತಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ. ಸೊರಬದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿ¯್ಲÁ ವ್ಯಾಪ್ತಿಯ ಕೆರೆ ಸಮಿತಿ ಪದಾಽಕಾರಿಗಳ ಪ್ರೇರಣಾ ಸಭೆಯಲ್ಲಿ ೬ ತಾಲೂಕುಗಳ ೨೫ ಕೆರೆಗಳಲ್ಲಿ ನೀಚಡಿಯ ಚೌಡಿಕೆರೆಯನ್ನು ಅತ್ಯುತ್ತಮವಾಗಿ ಮರು ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿರುವ ಕೆರೆ ನಿರ್ವಹಣಾ ಸಮಿತಿಗೆ ಅತ್ಯುತ್ತಮ ಕೆರೆ ಸಮಿತಿ ಎಂದು ಪುರಸ್ಕಾರ ನೀಡಲಾಗಿದೆ. ಪರಿಸರ ಜಲತಜ್ಞರಾದ ಶಿವಾನಂದ ಕಳವೆ, ಸಾಗರ ತಾಲೂಕು ಯೋಜನಾಽಕಾರಿ ಶಾಂತಾನಾಯಕ್ , ಹಿರೇಬಿಲಗುಂಜಿ ಗ್ರಾಪಂ ಪಿಡಿಒ ವಿಮಲಾಕ್ಷಿ, ನೀಚಡಿ ಕೆರೆ ನಿರ್ವಹಣಾ ಸಮಿತಿಯ ಪ್ರಮುಖರಾದ ಎನ್.ಟಿ.ಯೋಗೀಶ್, ದತ್ತಮೂರ್ತಿ, ಸುಭಾಷ್ ಬಾಪಟ್, ರಾಜೇಶ್, ಪ್ರಶಾಂತ್, ಶ್ಯಾಮï ಬಾಪಟ್ ಇತರರಿದ್ದರು.