ಅಮೃತ ಸರೋವರಗಳಲ್ಲಿ ಸಸಿ ನಾಟಿ

NREGA
ಕಂಪ್ಲಿ ತಾಲೂಕಿನ ಕಣ್ವಿ ತಿಮ್ಮಲಾಪುರ ಗ್ರಾಮದ ಅಮೃತ ಸರೋವರದ ದಡದಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಸಿದ್ಧತೆಗೊಳ್ಳುತ್ತಿರುವ ದೃಶ್ಯ.
Published on

ಕಂಪ್ಲಿ: ತಾಲೂಕಿನ ಐದು ಅಮೃತ ಸರೋವರಗಳ ದಡದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಲಮೂಲಗಳನ್ನು ಸಂರಕ್ಷಿಸುವ ಜೊತೆಗೆ ಅವುಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿಪಡಿಸಿದ್ದು, ಕೆರೆ ದಡಗಳನ್ನು ಸ್ವಚ್ಛಗೊಳಿಸಿ, ಧ್ವಜಕಟ್ಟೆ ನಿರ್ಮಿಸಿ ಅಲ್ಲಿ ಧ್ವಜಾರೋಹಣ ನೆರವೇರಿಸಲು ತಕ್ಕ ಸಿದ್ಧತೆಗಳು ನಡೆದಿವೆ.

ಕಣ್ವಿ ತಿಮ್ಮಲಾಪುರಗಳಲ್ಲಿ ಎರಡು, ರಾಮಸಾಗರ, ಉಪ್ಪಾರಹಳ್ಳಿ, ರಾಮಚಂದ್ರಪುರ ಕ್ಯಾಂಪ್‌ಗಳಲ್ಲಿ ತಲಾ ಒಂದೊಂದು ಅಮೃತ ಸರೋವರಗಳ ದಡದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಮೃತ ಸರೋವರ

ಈ ನಿಮಿತ್ತ ಇಡೀ ಗ್ರಾಮದಲ್ಲಿ ತಿರಂಗಧ್ವಜಾ ಮೆರವಣಿಗೆ ನಂತರ ಅಮೃತ ಸರೋವರ ಸ್ಥಳಗಳಲ್ಲಿ ತಿರಂಗ ಯಾತ್ರೆ ಮೆರವಣಿಗೆ ಸಮಾರೋಪಗೊಳ್ಳಲಿದೆ. ಅಮೃತ ಸರೋವರ ಸ್ಥಳದಲ್ಲಿ ಸಮಾವೇಶಗೊಂಡ ಜನತೆಗೆ ಅಮೃತ ಸರೋವರದ ಪರಿಸರ, ನೀರಿನ ಸ್ವಚ್ಛತೆ ಕಾಪಾಡಲು ಸ್ವಚ್ಛತೆಯ ಪ್ರತಿಜ್ಞೆ ಬೋಧಿಸಲಾಗುವುದು.

ಅಮೃತ ಸರೋವರ ಸ್ಥಳಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ಅವುಗಳ ಆರೈಕೆ, ಸುಸ್ಥಿರತೆಗಾಗಿ ಅರಣ್ಯೀಕರಣ ಚಟುವಟಿಕೆ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net