ವೃದ್ಧೆಯ ಬ್ಯಾಗ್‌ನಲ್ಲಿದ್ದ ನೆಕ್ಲೇಸ್ ಕಳವು

KSRTC Bus Stand In Shivamogga
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.
Published on

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್ ಹತ್ತುವಾಗ ವೃದ್ಧೆಯ ಬ್ಯಾಗ್‌ನಿಂದ ಬಂಗಾರದ ನೆಕ್ಲೇಸ್ ಅನ್ನು ಕಳ್ಳರು ಎಗರಿಸಿದ್ದಾರೆ.

ನ್ಯಾಮತಿಯ ನಿಂಗಮ್ಮ ಅವರು ನಕ್ಲೇಸ್ ಕಳೆದುಕೊಂಡವರು. ನಾಲ್ಕು ದಿನದ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದ ನಿಂಗಮ್ಮ ಅವರು ಗಾಂಧಿಬಜಾರ್‌ಗೆ ತೆರಳಿ 46 ಸಾವಿರ ರೂ. ಮೌಲ್ಯದ 8 ಗ್ರಾಂ ನೆಕ್ಲೇಸ್ ಖರೀಸಿದ್ದರು. ವಾಪಸ್ ನ್ಯಾಮತಿಗೆ ತೆರಳು ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುವಾಗ ಬ್ಯಾಗ್‌ನಲ್ಲಿದ್ದ ನಕ್ಲೇಸ್ ಅನ್ನು ಕಳವು ಮಾಡಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net