ಉಪ್ಪು ನೀರಿನ ತಡೆಗೆ ಅಗತ್ಯ ಕ್ರಮ

31gan7
Published on

ಕುಂದಾಪುರ: ನಾಡ, ಹಡವು, ಬಡಾಕೆರೆ ಹಾಗೂ ಸೇನಾಪುರ ಈ ನಾಲ್ಕು ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈ ಬಗ್ಗೆ ವಿವಿಧ ಸಂಟನೆಗಳ ಪ್ರತಿಭಟನೆ ಫಲವಾಗಿ ಈಗ ಜಿಲ್ಲಾಧಿಕಾರಿಗಳು ಜಂಟಿ ಸಭೆ ಕರೆದು, ಉಪ್ಪು ನೀರಿನ ತಡೆಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ವಿದ್ಯಾಕುವಾರಿ ನೇತೃತ್ವದಲ್ಲಿ ಮಣಿಪಾಲದ ರಜತಾದ್ರಿಯಲ್ಲಿ ನಡೆದ ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ‌್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬಂಟ್ವಾಡಿಯಲ್ಲಿ ನಿರ್ಮಿಸಿದ ಡ್ಯಾಂ ಅಡಿಭಾಗದಿಂದ ನೀರು ಸೋರಿಕೆಯಾಗುತ್ತದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೀರು ಸೋರಿಕೆಯಾದರೆ ನದಿ ನೀರಿಗೆ ಉಪ್ಪು ಬರುವುದಿಲ್ಲವೆಂದು ಸ್ಪಷ್ಟಪಡಿಸಿದರು. ಈ ಸಮಸ್ಯೆಯನ್ನು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಒಂದು ಸಂಶೋಧನಾ ತಂಡವನ್ನು ಕಳುಹಿಸಿ ಕೊಡುತ್ತೇವೆ. ಅದರ ವರದಿಯನ್ನಾಧರಿಸಿ ಮುಂದಿನ ದಿನದಲ್ಲಿ ಉಪ್ಪು ನೀರು ಬರುವುದನ್ನು ತಡೆಯುವ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಾಡ ಗ್ರಾ.ಪಂ. ಸದಸ್ಯ ರಾಜೀವ ಪಡುಕೋಣೆ, ಶೋಭಾ ಕೆರೆಮನೆ, ಕಾರ್ಮಿಕ ಮುಖಂಡ ಸುರೇಶ್ ಕಲ್ಲಾಗರ, ಡಿವೈಎಫ್‌ಐ ಪಡುಕೋಣೆ ಟಕದ ನಾಗರಾಜ ಕುರು, ರಾಜೇಶ್ ಪಡುಕೋಣೆ, ನಿಸರ್ಗ ಪಡುಕೋಣೆ, ವಿಶ್ವಾಸ್, ಜನವಾದಿ ಮಹಿಳಾ ಸಂಟನೆಯ ಶೀಲಾವತಿ, ನಾಗರತ್ನಾ, ಮನೋರಮ ಭಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net