ಅಗತ್ಯ ಸಾಮಗ್ರಿ ಕಿಟ್ ವಿತರಣೆ

MAY 28, HNP., PH. 2.
Published on

ಹೊಳೆನರಸೀಪುರ: ಲಾಕ್‌ಡೌನ್ ಸಮಯದಲ್ಲಿ ಕಷ್ಟದಲ್ಲಿ ಇದ್ದವರಿಗೆ ನೆರವಾಗಬೇಕಾದದ್ದು ಉಳ್ಳವರ ಧರ್ಮವಾಗಿದೆ ಎಂದು ಶ್ರೀ ಲಕ್ಷ್ಮೀವೆಂಕಟೇಶ್ವರ ಸೇವಾ ಸಂಸ್ಥೆ ಅಧ್ಯಕ್ಷ ಎಂ.ಡಿ.ಕುಮಾರ್ ತಿಳಿಸಿದರು.

ತಾಲೂಕಿನ ಹಳ್ಳಿಮೈಸೂರು ಹೋಬಳಿಯ ದೊಡ್ಡಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಗಿನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಡಾ.ಅಂಬೇಡ್ಕರ್ ನಗರದ 75 ಕುಟುಂಬಗಳಿಗೆ ಸಂಸ್ಥೆ ವತಿಯಿಂದ ಸಾಮಗ್ರಿ ಕಿಟ್ ವಿತರಿಸಿ ಮಾತನಾಡಿದರು.

ಸಕ್ಕರೆ, ಬೇಳೆ, ಎಣ್ಣೆ, ಈರುಳ್ಳಿ ತಲಾ 1 ಕೆಜಿ ಹಾಗೂ ಜೀರಿಗೆ, ಸೋಪು ಮತ್ತು ಇತರ ಅಗತ್ಯ ಸಾಮಗ್ರಿಗಳಿರುವ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಕೆ.ತಿಮ್ಮಯ್ಯ, ಹಿರಿಯರಾದ ಜವರಯ್ಯ, ಈರಯ್ಯ, ಕಾಳಯ್ಯ, ಸಂಸ್ಥೆ ಉಪಾಧ್ಯಕ್ಷ ಎಂ.ಕೆ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಡಿ.ಗೋವಿಂದರಾಜು, ಖಜಾಂಚಿ ಎಂ.ಡಿ.ಜಯರಾಮ, ಎಂ.ಕೆ.ಮಲ್ಲಿಕಾರ್ಜುನ, ಎಂ.ಡಿ.ಚಿನ್ಮಯ, ಎಂ.ಜೆ.ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net