ದೇವಾಲಯಗಳ ನಿರ್ಮಾಣಕ್ಕೆ ಅಗತ್ಯ ಧನಸಹಾಯ

1
ಚಗಚಗೆರೆ ಗ್ರಾಮದಲ್ಲಿ ಬೀರಲಿಂಗೇಶ್ವರಸ್ವಾಮಿ ದೇವಾಲಯಕ್ಕೆ 1,50,000 ರೂ. ಗಳ ಸಹಾಯಧನದ ಚೆಕ್ ಅನ್ನು ಸತೀಶ್ ಹಸ್ತಾಂತರಿಸಿದರು. ಯೋಗೇಶ್, ಈಶ್ವರಪ್ಪ, ಶಿವಸ್ವಾಮಿ, ನಂಜೇಗೌಡ, ಸೀತಾರಾಮ್, ಶಶಿಕಲಾ ಇದ್ದರು.
Published on

ಗಂಡಸಿ: ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶಿಥಿಲಗೊಂಡಿರುವ ಮತ್ತು ಹೊಸದಾಗಿ ಹಿಂದು ಧಾರ್ಮಿಕ ದೇವಾಲಯಗಳ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಧನಸಹಾಯ ನೀಡಲಾಗಿದೆ ಎಂದು ಸಂಸ್ಥೆಯ ಕೇಂದ್ರ ಕಚೇರಿಯ ವಿಮಾ ವಿಭಾಗದ ಮುಖ್ಯಸ್ಥ ಸತೀಶ್ ಹೇಳಿದರು.

ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀಬೀರಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಸಂಸ್ಥೆ ವತಿಯಿಂದ 1,50,000 ರೂ. ಗಳ ಚೆಕ್ ಅನ್ನು ದೇವಾಲಯದ ಆಡಳಿತ ಮಂಡಳಿಗೆ ಶನಿವಾರ ಹಸ್ತಾಂತರಿಸಿ ಮಾತನಾಡಿದರು.

ವೀರೇಂದ್ರ ಹೆಗ್ಗಡೆಯವರು ಬಡವರು, ದೀನದಲಿತರ ಆರ್ಥಿಕ ಏಳಿಗೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಶಿಕ್ಷಣ, ಮಹಿಳೆಯರ ಸಬಲೀಕರಣ, ಗುಂಪು ಸಾಲಗಳ ಮೂಲಕ ರಾಜ್ಯದ ಜನತೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಮೀಪದ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯಗಳನ್ನು ದೊರಕುವಂತೆ ಮಾಡಿದ್ದಾರೆ. ಇದರೊಂದಿಗೆ ಕೆರೆಗಳ ನಿರ್ಮಾಣ, ಪ್ರತಿನಿಧಿ ಸೌಲಭ್ಯ, ಶುದ್ಧ ಕುಡಿಯುವ ನೀರಿನ ಘಟಕ, ವಾತ್ಸಲ್ಯ, ವಿಮಾ ಯೋಜನೆಗಳಂತಹ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ, ತಾಪಂ ಮಾಜಿ ಸದಸ್ಯ ಈಶ್ವರಪ್ಪ, ವಲಯ ಮೇಲ್ವಿಚಾರಕ ಸೀತಾರಾಮ್, ಸೇವಾ ಪ್ರತಿನಿಧಿ ಶಶಿಕಲಾ, ಒಕ್ಕೂಟದ ಅಧ್ಯಕ್ಷ ಶಿವಸ್ವಾಮಿ, ದೇವಾಲಯದ ಕಮಿಟಿ ಅಧ್ಯಕ್ಷ ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ನಂಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net