

ರೋಣ: ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಲಭ್ಯವಿದ್ದು, ಯಾರೂ ಪ್ರತಿಪಕ್ಷಗಳ ಮಾತಿಗೆ ಕಿವಿಗೊಡಬೇಡಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಎದುರಿರುವ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಲಗಂಜಿ ಮಠದ ಶ್ರೀಗುರುಪಾದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಜರತ್ ಸೈಯದ್ ಸುಲೇಮಾನ್ ಶಾವಲಿ ದರ್ಗಾದ ಅಜ್ಜನವರು ಅಧ್ಯಕ್ಷತೆ ವಹಿಸಿದ್ದರು.
ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಬಾವಾಸಾಬ ಬೆಟಗೇರಿ, ಮಹ್ಮದ್ ಗೈಬುಸಾಬ ತರಫದಾರ, ಅಬ್ದುಲ್ ರೆಹಮಾನ, ಎಸ್. ಸೈಯ್ಯದ, ಅಲ್ ಹಾಜ್ ಅಬ್ದುಲ್‌ಲತೀಫ್, ಮಲೀಕಸಾಬ ಯಲಿಗಾರ, ಖತೀಬ ಶಬ್ಬಿರಅಹ್ಮದ ಖಾಜಿ, ಆದಮಆಲಿ ಹುಲ್ಲೂರ, ಜಾವೀದ್ ಅಹಮದ್ ಮುಲ್ಲಾ ಸೇರಿ ಇತರರು ಇದ್ದರು.