ಮುಂದುವರಿದ ಕಾಮಗಾರಿಗೆ ಅಗತ್ಯ ಅನುದಾನ

ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು  ಕೊಳತ್ತೂರು ಗ್ರಾಮದ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೆ.ಎನ್.ಕುಮಾರ, ಆರ್.ಸೋಮಣ್ಣ, ಕೆ.ಶಂಕರ, ವೀರಭದ್ರ, ರಾಜೇಂದ್ರ, ಮರಿಸ್ವಾಮಿ, ಗದ್ದೆಮೊಳೆ ಸಿದ್ದರಾಜು, ಮೇದನಿ ಕುಮಾರ್ ಇತರರು ಇದ್ದರು.
ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಕೊಳತ್ತೂರು ಗ್ರಾಮದ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೆ.ಎನ್.ಕುಮಾರ, ಆರ್.ಸೋಮಣ್ಣ, ಕೆ.ಶಂಕರ, ವೀರಭದ್ರ, ರಾಜೇಂದ್ರ, ಮರಿಸ್ವಾಮಿ, ಗದ್ದೆಮೊಳೆ ಸಿದ್ದರಾಜು, ಮೇದನಿ ಕುಮಾರ್ ಇತರರು ಇದ್ದರು.
Published on

ತಿ.ನರಸೀಪುರ: ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಗಾಣಿಗರ ಸಮುದಾಯ ಭವನದ ಮುಂದುವರಿದ ಕಾಮಗಾರಿ ಹಾಗೂ ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿಗೆ ಶಾಸಕರ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ನೆರವು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಾದೇವಪ್ಪ ಭರವಸೆ ನೀಡಿದರು.

ಬೆಂಗಳೂರಿನ ಗೃಹ ಕಚೇರಿಯಲ್ಲಿ ಬುಧವಾರ ಸಂಜೆ ತಮ್ಮನ ಭೇಟಿಯಾದ ಕೊಳತ್ತೂರು ಗ್ರಾಮದ ಮುಖಂಡರ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಹತ್ತಾರು ವರ್ಷಗಳಿಂದಲೂ ಅನುದಾನವಿಲ್ಲದರಿಂದ ಗಾಣಿಗರ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡಿಲ್ಲ. ತಾಂತ್ರಿಕ ಉಪ ವಿಭಾಗಾಧಿಕಾರಿಯಿಂದ ಯೋಜನಾ ವೆಚ್ಚ ತಯಾರಿಸಿ, ಅಗತ್ಯ ಅನುದಾನವನ್ನು ಮಂಜೂರು ಮಾಡುತ್ತೇನೆ. ಜತೆಗೆ ದೇವಾಲಯಗಳ ಜೀರ್ಣೋದ್ಧಾರಕ್ಕೂ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿಶೇಷ ಘಟಕ ಯೋಜನೆಯ ಅನುದಾನ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈಗಾಗಲೇ ಕೊಳತ್ತೂರು ಗ್ರಾಮದ ಎಲ್ಲ ರಸ್ತೆಗಳು ಅಭಿವೃದ್ಧಿ ಗೊಂಡಿವೆ. ಕಾವೇರಿ ನೀರಾವರಿ ನಿಗಮದ ಅನುದಾನದಲ್ಲಿ ದೊಡ್ಡ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಕಾಮಗಾರಿಗಳಿಗೂ ರಾಜ್ಯ ಸರ್ಕಾರದಿಂದ ಅನುದಾನ ಕಲ್ಪಿಸುವುದಾಗಿ ತಿಳಿಸಿದರು.

ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಕುಮಾರ, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಸೋಮಣ್ಣ, ಮಾಜಿ ಉಪಾಧ್ಯಕ್ಷ ಕೆ.ಶಂಕರ, ವಕೀಲ ವೀರಭದ್ರ, ಯಜಮಾನರಾದ ರಾಜೇಂದ್ರ, ಮರಿಸ್ವಾಮಿ, ಮುಖಂಡರಾದ ಟ್ರ್ಯಾಕ್ಟರ್‌ವೀರಭದ್ರ, ಕಿರಣ್, ಭದ್ರಪ್ಪ, ಸಿದ್ದಪ್ಪ, ಗದ್ದೆಮೋಳೆ ಸಿದ್ದರಾಜು ಹಾಗೂ ಮೇದನಿ ಕುಮಾರ್‌ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net