

ಚಿಕ್ಕೋಡಿ: ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಸೇರಿ ಅಗತ್ಯ ಮೂಲ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಮುಗಳಿ ಹಾಗೂ ಮಂಗನೂರ ಗ್ರಾಮದಲ್ಲಿ ಸೋಮವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅಂದಾಜು 10 ಲಕ್ಷ ರೂ. ಮೊತ್ತದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಬೆನ್ನು ಬಿದ್ದಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಜತೆಗೆ ಸಾಲು ಸಾಲು ಹಗರಣಗಳಿಂದ ಜನ ಬೇಸತ್ತಿದ್ದು, ಸ್ವಪಕ್ಷದ ಶಾಸಕರೇ ರೋಸಿಹೋಗಿದ್ದಾರೆ ಎಂದರು.
ಮಹೇಶ ಭಾತೆ, ವಿಜಯ ಕೋಟಿವಾಲೆ ಮಾತನಾಡಿದರು. ಈರಗೌಡ ಪಾಟೀಲ, ರಾಜು ಹರಗನ್ನವರ, ವಿಜಯ ಕೊಠಿವಾಲೆ, ತಮ್ಮಣ್ಣ ಬಂಬಲವಾಡೆ, ವಿರೂಪಾಕ್ಷಿ ಕೊಟಬಾಗಿ, ರಾಜು ಪಾಟೀಲ, ಕುಮಾರ ಕವಳಿಕಟ್ಟಿ, ವಾಸುದೇವ ಕುಲಕರ್ಣಿ, ಅಪ್ಪಾಸಾಹೇಬ ದೊಡ್ಡಮನಿ, ಮಾದೇವ ಪಾಟೀಲ, ಸುನೀಲ ಪಾಟೀಲ, ದುಂಡಪ್ಪ ಪಾಟೋಳಿ ಇತರರಿದ್ದರು.