ಹುಕ್ಕೇರಿ: ತಾಲೂಕಿನ ನೇರ್ಲಿ ಗ್ರಾಮದ ಪಿಕೆಪಿಎಸ್ ಆಡಳಿತ ಮಂಡಳಿಗೆ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರುದ್ರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಬಸವಪ್ರಸಾದ ಸಂಕಪಾಳ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶೈಲಜಾ ಪಾಟೀಲ ಘೋಷಿಸಿದರು.
ಎಸ್.ಕೆ.ಹುಕ್ಕೇರಿ, ಮಧುಕರ ಖೋತ, ಈರಪ್ಪ ಲಬ್ಬಿ, ಅಪ್ಪಾಸಾಹೇಬ ಪಾಟೀಲ, ಅಣ್ಣಾಗೌಡ ಪಾಟೀಲ, ಶೋಭಾ ಕಲ್ಲೋಳಿಮಠ, ಗಾಯತ್ರಿ ಹೊಸಗೌಡರ, ಸುನೀಲ ಹೊಸಮನಿ, ಆಕಾಶ ಗುರವ ನಿರ್ದೇಶಕರಾಗಿ ಆಯ್ಕೆಯಾದರು. ಈಶ್ವರ ಖೋತ, ಮಲ್ಲಪ್ಪ ಹುಕ್ಕೇರಿ, ಶಂಕರ ಸಂಕಪಾಳ, ನಿತೇಶ ಜಾಧವ, ಮಲ್ಲಿಕಾರ್ಜುನ ಕರೋಶಿಮಠ, ರಾಜಶೇಖರ ಹಂದಿಗೂಡಮಠ, ರವೀಂದ್ರ ಲಠ್ಠಿ, ವಿರೂಪಾಕ್ಷಿ ಶಿರಗನ್ನವರ ಡಿಸಿಸಿ ಬ್ಯಾಂಕ್ ನಿರೀಕ್ಷಕ ಕೆ.ಎಸ್.ಗವಿಮಠ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಆರ್.ಎಸ್.ಶಿಂಧೆ ಇತರರಿದ್ದರು.