

ಧಾರವಾಡ: ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರ ಮತ್ತು ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯ ೧೦ನೇ ತಂಡದಿAದ ಜಿಲ್ಲಾಽಕಾರಿ ಕಚೇರಿಯ ಸಭಾಭವನದಲ್ಲಿ ಸ್ವಯಂಸೇವಕರಿಗೆ ಗುರುವಾರ ವಿಪತ್ತು ನಿರ್ವಹಣೆ ಮತ್ತು ಪ್ರಾಣ ರಕ್ಷಣೆ ಕುರಿತು ತರಬೇತಿ ನೀಡಲಾಯಿತು.
ತರಬೇತಿಯಲ್ಲಿ ತುರ್ತು ಸಂದರ್ಭಗಳಾದ ನೈಸರ್ಗಿಕ ವಿಕೋಪ, ಪ್ರವಾಹ, ಚಂಡಮಾರುತ, ಭೂಕಂಪ, ಗುಡ್ಡಕುಸಿತ, ಅಪಘಾತ, ಗ್ಯಾಸ್ ಸೋರಿಕೆ ಸಂದರ್ಭಗಳಲ್ಲಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳ ಆಗಮನ ವಿಳಂಬವಾದಾಗ ನೆಹರು ಯುವ ಕೇಂದ್ರದ ಸ್ವಯಂಸೇವಕರು ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ತರಬೇತಿ ನೀಡಲಾಯಿತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಽಕಾರಿ ಎಂ. ಗೌತಮ್ ರೆಡ್ಡಿ ಮಾತನಾಡಿ, ಎನ್‌ಡಿಆರ್‌ಎಫ್ ತರಬೇತಿಯಿಂದ ಆಪತ್ತಿನಲ್ಲಿರುವ ಜನರಿಗೆ ಆತ್ಮಸ್ಥೆÊರ್ಯ ತುಂಬಿ, ಅವರ ಜೀವ ಉಳಿಸಲು ಸಹಾಯ ಆಗುತ್ತದೆ ಎಂದರು.
ಎನ್‌ಡಿಆರ್‌ಎಫ್ ತಂಡದ ಇನ್‌ಸ್ಪೆಕ್ಟರ್ ಕಮಾಂಡರ್ ಸುಜೀತ್ ಗೋಪ್, ಅಽಕಾರಿಗಳಾದ ದಿಲ್ಲೇಶ್ವರರಾವ ಮತ್ತು ಮಲ್ಲಿಕಾರ್ಜುನ ನೆಹರು ಯುವ ಕೇಂದ್ರ ಹಿರಿಯ ಸ್ವಯಂಸೇವಕ ಶಿವಾಜಿ ಎನ್.ಕೆ. ಹಾಗೂ ಕೆಸಿಡಿ ಸಮಾಜಕಾರ್ಯ ವಿಭಾಗದ ಕ್ಷೇತ್ರ ಕಾರ್ಯಕರ್ತರಾದ ಶಿಲ್ಪಾ ಮಾನೆ, ವೆಲನ್ಸ್ಸಿಯಾ ಆರ್, ಕಾವ್ಯಾ ಬಾದಾಮಿ, ಅನುರಾಧಾ ಇಂಚಲಮಠ, ಇತರರಿದ್ದರು. ಸಂಜಯಕುಮಾರ ಬಿರಾದಾರ ವಂದಿಸಿದರು.