ರಾಜಕೀಯದಲ್ಲಿ ಎನ್‌ಸಿಪಿಎಸ್ ನಿರ್ಣಾಯಕ ಪಾತ್ರ : ಸಚಿವ ಎ.ಕೆ.ಶಶೀಂದ್ರನ್ ಬಣ್ಣನೆ

07
Published on

ಕಾಸರಗೋಡು: ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಎನ್‌ಸಿಪಿಎಸ್ ಮಹತ್ವದ ಪಾತ್ರ ವಹಿಸಲಿರುವುದಾಗಿ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಖಾತೆ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ.

ಕಾಞಂಗಾಡಿನ ಪಿಡಬ್ಲುೃಡಿ ವಿಶ್ರಾಂತಿ ಗೃಹದಲ್ಲಿ ಕಾಸರಗೋಡು ಜಿಲ್ಲಾ ಎನ್‌ಎಸ್‌ಪಿಎಸ್ ನಾಯಕತ್ವ ಸಭೆ ಉದ್ಘಾಟಿಸಿ ಮಾತನಾಡಿದರು.

ಎನ್‌ಸಿಪಿಎಸ್ ಜಿಲ್ಲಾಧ್ಯಕ್ಷ ಕರೀಮ್ ಚಂದೇರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ಸಿ.ಬಾಲನ್, ಜಿಲ್ಲಾ ಉಪಾಧ್ಯಕ್ಷ ರಾಜು ಕೊಯ್ಯೋನ್, ಕೋಶಾಧಿಕಾರಿ ಬೆನ್ನಿ ನಾಗಮಟ್ಟಂ, ಪ್ರಧಾನ ಕಾರ್ಯದರ್ಶಿಗಳಾದ ಟಿ.ನಾರಾಯಣನ್, ಉದಿನೂರು ಸುಕುಮಾರನ್, ಒ.ಕೆ.ಬಾಲಕೃಷ್ಣನ್, ಸುಬೈರ್ ಪಡ್ಪು, ಎ.ಟಿ.ವಿಜಯನ್, ಸಿದ್ದಿಕ್ ಕೈಕಂಬ, ದಾಮೋದರ ಬೆಳ್ಳಿಗೆ, ಸೀನತ್ ಸತೀಶನ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net