ಎನ್​ಸಿಇಆರ್​ಟಿ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿಯ ದೀಕ್ಷಾಗೆ ಪ್ರಥಮ ಸ್ಥಾನ

deeksha
Published on

ಬೆಳ್ತಂಗಡಿ(ದ.ಕ.): ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್​ಸಿಇಆರ್​ಟಿ) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ದೀಕ್ಷಾ ಬಿ.ಎಸ್. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇಲ್ಲಿ ಆಯ್ಕೆಯಾದವರು ಆರ್​ಐಇ (ರೀಜನಲ್ ಇನ್​ಸ್ಟಿಟ್ಯೂಟ್ ಆಫ್ ಎಜುಕೇಶನ್)ಗಳಲ್ಲಿ ಮೂಲವಿಜ್ಞಾನ ಓದಲು ಅರ್ಹತೆ ಪಡೆಯುತ್ತಾರೆ. ಆರ್​ಐಇ ಮೈಸೂರಿನಲ್ಲಿ ಉನ್ನತ ವ್ಯಾಸಂಗಕ್ಕೆ ದೀಕ್ಷಾ ಆಯ್ಕೆಯಾಗಿದ್ದಾರೆ. ಎಂಎಸ್ಸಿ ಇಡಿ ಮತ್ತು ಬಿಎಸ್ಸಿ ಇಡಿ ಪದವಿಗೆ ಅರ್ಹತೆ ಪಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೀಕ್ಷಾ ಎಂಎಸ್ಸಿ ಇಡಿ ಗಣಿತ ಮತ್ತು ಎಂಎಸ್ಸಿ ಇಡಿ ರಸಾಯನ ಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ(ರ‍್ಯಾಂಕ್) ಸ್ಥಾನ, ಬಿಎಸ್ಸಿ ಇಡಿಯಲ್ಲಿ ರಾಜ್ಯಕ್ಕೆ ಮೊದಲ (ರ‍್ಯಾಂಕ್) ಸ್ಥಾನ ಪಡೆದಿದ್ದಾರೆ.

ದೀಕ್ಷಾ ಈ ಮೊದಲು ದ್ವಿತೀಯ ಪಿಯು ಪರೀಕ್ಷೆಯಲ್ಲಿ 593 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದು, ಸಿಇಟಿಯಲ್ಲೂ ಉತ್ತಮ ರ್ಯಾಂಕ್ ಪಡೆದಿದ್ದರು. ದೀಕ್ಷಾ ಅವರು ಉಜಿರೆ ಎಸ್​ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಧರ ಭಟ್ -ಉಜಿರೆ ಹಳೇಪೇಟೆಯ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕಿ ವೀಣಾ ಶ್ಯಾನುಭಾಗ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net