ಎನ್‌ಸಿಡಿಎಫ್‌ಐ ಅಭಿವೃದ್ಧಿಗೆ ಶ್ರಮ

7manju2
ಗುಜರಾತನ ಆನಂದ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಮಿತ್ ಷಾ ಅವರನ್ನು ಬಾಲಚಂದ್ರ ಜಾರಕಿಹೊಳಿ, ವೆಂಕಟರಾವ್ ನಾಡಗೌಡ ಬರಮಾಡಿಕೊಂಡರು. ಡಾ. ಮೀನೇಶ್ ಭಾಯಿ ಷಾ, ಮಂಗಲ್ಜಿತ್ ರಾಯ್, ಶ್ಯಾಮಲ್‌ಭಾಯ್ ಪಟೇಲ್ ಇತರರಿದ್ದರು.
Published on

ಬೆಳಗಾವಿ: ಸಹಕಾರಿ ಸಂಘಗಳ ಆರ್ಥಿಕ ಮತ್ತು ತಾಂತ್ರಿಕತೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಎಫ್‌ಐ) ದೇಶದ ಎಲ್ಲ ಸಹಕಾರಿ ಸಂಘಗಳಿಗೆ ಮುಕುಟವಾಗಿದೆ ಎಂದು ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ ಹೇಳಿದರು. ಗುಜರಾತ್‌ನ ಆನಂದ ನಗರದಲ್ಲಿ ಅತ್ಯಾಧುನಿಕ ಸೌಲಭ್ಯ ಒಳಗೊಂಡಿರುವ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಹಕಾರಿ ವಲಯದಲ್ಲಿ ಮಿಂಚಿನಂತೆ ಕೆಲಸ ಮಾಡುತ್ತಿರುವ ಎನ್‌ಸಿಡಿಎ್ಐ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಈಗಾಗಲೇ ಈ ಸಂಸ್ಥೆ ವಾರ್ಷಿಕ 7 ಸಾವಿರ ಕೋಟಿ ರೂ. ವಹಿವಾಟು ನಡೆಸಿ ಪ್ರಗತಿ ಸಾಧಿಸುತ್ತಿದೆ. ಸಹಕಾರಿ ವಲಯದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡಲು ಸಿದ್ಧ ಎಂದರು. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಚೇರ್ಮನ್ ಡಾ. ಮೀನೇಶ್ ಷಾ, ಶಾಸಕ ಬಾಲಚಂದ್ರ ಜಾರಕಿಹೊಳಿ, ಮಂಗಲಜಿತ್ ರಾಯ್, ಶಾಮಲ್ ಭಾಯಿ ಪಟೇಲ್, ವೆಂಕಟರಾವ್ ನಾಡಗೌಡ, ಕೆ.ಎಸ್.ಮಣಿ, ನರೀಂದಿರಸಿಂಗ್ ಶೇರ್ಗಿಲ್, ಎಸ್.ರಘುರಾಮ್, ಸಮೀರಕುಮಾರ ಫರೀದಾ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಸಜ್ಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net