ದೇಶಪ್ರೇಮ ಬೆಳೆಸುವಲ್ಲಿ ಎನ್‌ಸಿಸಿ ಪೂರಕ

6 vikram 14
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎನ್‌ಸಿಸಿಯಿಂದ ಮಕ್ಕಳು ಅನೇಕ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು. ಶಿಸ್ತು, ಸಂಯಮ, ಒಗ್ಗಟ್ಟು, ಐಕ್ಯತೆ, ದೇಶಪ್ರೇಮ ಬೆಳೆಸುವಲ್ಲಿ ಎನ್‌ಸಿಸಿ ಪೂರಕವಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಎನ್‌ಸಿಸಿ ಹಿರಿಯರ ವಿಭಾಗದ ಕ್ಯಾಪ್ಟನ್ ಮಹೇಶ ಕುರುಬರ ಹೇಳಿದರು.
ನಗರದ ಕರ್ನಾಟಕ ಎಜುಕೇಶನ್ ಬೋರ್ಡ್‌ನ ಕರ್ನಾಟಕ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಎನ್‌ಸಿಸಿ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಪ್ರಾಂಶುಪಾಲ ಎನ್.ಎನ್. ಸವಣೂರ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಎನ್‌ಸಿಸಿ ಕೆಡೆಟ್‌ಗಳಿಂದ ಪಥಸಂಚಲನ ಹಾಗೂ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು. ಶಿಕ್ಷಕರಾದ ಕೆ.ಸಿ. ಪ್ರಕಾಶ, ಶಿವಪ್ರಕಾಶ ಬೋಂಗಾಳೆ, ರಮೇಶ ಮೂಲಿಮನಿ, ಶೋಭಾದೇವಿ, ಇತರರು ಇದ್ದರು. ಎನ್‌ಸಿಸಿ ಅಧಿಕಾರಿ ವಿ.ಬಿ. ಶಿಂಗೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net