

ಮಡಿಕೇರಿ:
ಎನ್‌ಸಿಸಿ ದಿನಾಚರಣೆಯ ಪ್ರಯುಕ್ತ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿಯ ವಿದ್ಯಾರ್ಥಿ ಕೆಡೆಟ್‌ಗಳು ಮಡಿಕೇರಿಯ ಐತಿಹಾಸಿಕ ಸ್ಮಾರಕ ತಾಣವಾದ ರಾಜರ ಗದ್ದುಗೆಯ ಆಸುಪಾಸು ಭಾನುವಾರ ಶುಚಿತ್ವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 100ಕ್ಕೂ ಅಧಿಕ ವಿದ್ಯಾರ್ಥಿ ಕೆಡಟ್ ಗಳು ಶುಚಿತ್ವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಕೆಡೆಟ್‌ಗಳು ಗದ್ದುಗೆಯ ಆಸುಪಾಸಿನಲ್ಲಿದ್ದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಸಂಗ್ರಹಿಸಿದರು. ಗದ್ದುಗೆಯ ಗೋಡೆಗಳನ್ನು ಸ್ವಚ್ಛಗೊಳಿಸಿದರು. ಈ ಚಟುವಟಿಕೆಯಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ಹಾಗೂ ಎನ್ ಸಿ ಸಿ ಅಧಿಕಾರಿಗಳಾದ ಮೇ. ಪ್ರೊ. ರಾಘವ ಬಿ., ಹವಾಲ್ದಾರ್ ಮೇ. ರಾಮ್ ಬಹದ್ದೂರ್ ಥಾಪಾ ಹಾಗೂ ಉಪನ್ಯಾಸಕ ಪವನ್ ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಮೇ. ಪ್ರೊ. ರಾಘವ ಮಾತನಾಡಿ ರಾಜರ ಗದ್ದುಗೆಯ ವಿವರ, ವಾಸ್ತುಶಿಲ್ಪ, ಸೌಂದರ್ಯ ಮೀಮಾಂಸೆ, ಸಮಾಜ ಸೇವೆಯಲ್ಲಿ ಎನ್ ಸಿ ಸಿ ಕೆಡೆಟ್‌ಗಳ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.