

ಚಿಕ್ಕಮಗಳೂರು: ಜಾತ್ಯಾತೀತ ನಿಲುವು ಒಳಗೊಂಡಿರುವ ಕಾಂಗ್ರೆಸ್‌ನಲ್ಲಿ ಪಕ್ಷನಿಷ್ಟೆ ಹಾಗೂ ಪ್ರಾಮಾಣಿಕವಾಗಿ ದುಡಿದಿರುವ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ಕಲ್ಪಿಸಿರುವುದಕ್ಕೆ ಸಿಡಿಎ ನೂತನ ಪದಾಧಿಕಾರಿಗಳ ಆಯ್ಕೆಯೇ ನೈಜಸಾಕ್ಷಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಸಿಡಿಎ ಕಚೇರಿಯಲ್ಲಿ ಸೋಮವಾರ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಮಹಮ್ಮದ್ ನಯಾಜ್ ಹಾಗೂ ಸದಸ್ಯರಾದ ರಾಘವೇಂದ್ರ, ಶ್ರದೀಪ್, ಗುಣವತಿ ಹಾಗೂ ಆಶಾ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಹಿಂದಿನಿAದಲೂ ಸರ್ವಜನಾಂಗ ಶ್ರೇಯೋಭಿವೃದ್ದಿ ಶ್ರಮಿಸುವ ಏಕೈಕ ಪಕ್ಷ. ಅದರಂತೆ ಸಿಡಿಎ ನೂತನ ಪದಾಧಿಕಾರಿಗಳನ್ನು ಸರ್ವಧರ್ಮ ಪ್ರಾರ್ಥನೆ ಮೂಲಕ ಅಧಿಕಾರದ ಗದ್ದುಗೆ ಕೂರಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಆದೇಶದಂತೆ ಸಿಕ್ಕಿರುವ ಅವಧಿಯಲ್ಲಿ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವ ಜೊತೆಗೆ ಯಾವುದೇ ಲೋಪವೆಸಗದಂತೆ ಚಿಕ್ಕಮಗಳೂರಿನ ಜನತೆಗೆ ಸವಲತ್ತು ಒದಗಿಸಬೇಕು. ಅಲ್ಲದೇ ಸಿಡಿಎ ಮಾಜಿ ಅಧ್ಯಕ್ಷರುಗಳ ಜಾತ್ಯಾತೀತ ನಿಲುವು, ಸಲಹೆ ಹಾಗೂ ಸಹಕಾರವನ್ನು ಪಡೆದು ಮುನ್ನೆಡೆಯಬೇಕು ಎಂದು ತಿಳಿಸಿದರು.
ಸಿಡಿಎ ಮೊಟ್ಟಮೊದಲ ಅವಧಿಗೆ ಅನೇಕ ಮುಖಂಡರುಗಳು ಆಕ್ಷಾಂಕಿಯಾಗಿದ್ದರು. ಆದರೆ ರಾಜ್ಯ ಮಟ್ಟದ ತೀರ್ಮಾನಕ್ಕೆ ನಾವುಗಳು ತಲೆಬಾಗಲೇಬೇಕು. ಹೀಗಾಗಿ ಮುಂದಿನ ಅವಧಿಯಲ್ಲಿ ಪಕ್ಷನಿಷ್ಟೆ ಹೊಂದಿರುವ ಮುಖಂಡರಿಗೆ ಖಂಡಿತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ ಮಹಮ್ಮದ್ ನಯಾಜ್ ಮಾತನಾಡಿ, ಪಕ್ಷದಲ್ಲಿ ಅನೇಕ ವರ್ಷಗಳÀ ಸೇವೆಯನ್ನು ಪರಿಗಣಿಸಿ ಸಣ್ಣವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನೀಡಿದೆ. ಸಾಮಾಜಿಕ ಬದ್ಧತೆ, ಸದಸ್ಯರುಗಳು ಒಗ್ಗಟ್ಟಿನಿಂದ ಕ್ಷೇತ್ರದ ಜನತೆಗೆ ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಅಲ್ಲದೇ ತಮ್ಮ ಆಯ್ಕೆಗೆ ಸಹಕರಿಸಿದ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಶಾಸಕರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಅಧಿಕಾರದ ಆಸನ ಶಾಶ್ವ ತವಲ್ಲ. ಸಿಕ್ಕಿರುವ ಅವಧಿಯಲ್ಲಿ ಕೈಗೊಂಡAತಹ ಅಭಿವೃದ್ದಿ ಕೆಲಸಗಳೇ ಶಾಶ್ವತ. ಈ ತತ್ವವನ್ನು ನೂತನ ಪದಾಧಿಕಾರಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಜನಮಾನಸದಲ್ಲಿ ನೆಲೆಯೂರಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಪದಾಧಿಕಾರಿಗಳಿಗೆ ಹಿಂದೂ ಸಂಪ್ರದಾಯ ಮಂತ್ರಾಕ್ಷತೆ ಹಾಕಲಾಯಿತು. ಮಸೀದಿ ಗುರುಗಳು ಹಾಗೂ ಕ್ರಿಶ್ಚಿಯನ್ ಧರ್ಮಾನುಸಾರ ಮಂತ್ರಪಠಿಸಿ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸAದೀಪ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ಡಿ.ಎಲ್.ವಿಜಯಕುಮಾರ್, ರೇಖಾಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಮುಖಂಡರಾದ ಎಂ.ಎಲ್.ಮೂರ್ತಿ, ಕೆ.ಎಸ್.ಶಾಂತೇಗೌಡ, ಹನೀಫ್, ತನೋಜ್ ನಾಯ್ಡು, ಬಿ.ಎಚ್.ಹರೀಶ್, ಮಲ್ಲೇಶಸ್ವಾಮಿ, ಹಿರೇಮಗಳೂರು ರಾಮಚಂದ್ರ, ರೂಬೆನ್ ಮೋಸಸ್, ನಗರಸಭೆ ಸದಸ್ಯರಾದ ಮುನೀರ್ ಅಹಮದ್, ಖಲಂದರ್, ಶಾದಬ್, ಅನ್ಸರ್ ಆಲಿ ಮತ್ತಿತರರಿದ್ದರು.