

ನಾಯಕನಹಟ್ಟಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು.
ಸಮೀಪದ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 18 ಲಕ್ಷ ಜನ ಸಂಖ್ಯೆಯಿದ್ದು, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕರಿಂದ 4 ಲಕ್ಷ ಮನೆಗಳ ಆರೋಗ್ಯ ಸರ್ವೇ ಕಾರ್ಯ ನಡೆಸಿ ಜಿಲ್ಲೆಯ ಜನರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.
ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿರುವ 409 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. 7,114 ಮಂದಿಯನ್ನು ಗೃಹ ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 2,022 ಮಂದಿಯ ರಕ್ತ, ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಪಿ.ಎನ್.ಮುತ್ತಯ್ಯ, ಆರೋಗ್ಯ ಇಲಾಖೆಯ ಚಿದಾನಂದಪ್ಪ, ಮೂಗಪ್ಪ, ಜಾನಕಿ, ನೆಲಗೇತನಹಟ್ಟಿ ಆಡಳಿತ ವೈದ್ಯಾಧಿಕಾರಿ ಡಾ.ಸಣ್ಣಓಬಯ್ಯ ಮಾತನಾಡಿದರು.
ಹಿರಿಯ ಆರೋಗ್ಯ ಸಹಾಯಕ ಎಂ.ಶೇಷಾದ್ರಿನಾಯಕ, ವೈ.ತಿಪ್ಪೇಸ್ವಾಮಿ, ಹನುಮಂತಪ್ಪ, ಮಂಜುನಾಥ್, ಬಿ.ಬೋರಮ್ಮ, ಗ್ರಾಪಂ ಸದಸ್ಯರಾದ ದೊಡ್ಡೋಬಯ್ಯ, ಪುರ‌್ನಮುತ್ತಯ್ಯ, ಈಗಲಬೋರಯ್ಯ, ನಿಂಗರಾಜ, ಗೌಡ್ರು ಸಣ್ಣ ಬೋರಯ್ಯ ಇದ್ದರು.