ಹುಂಡಿ ಹಣ 25,54,344 ಲಕ್ಷ ರೂ.

CTD NYK HUNDI 27 (2)
Published on

ನಾಯಕನಹಟ್ಟಿ: ಐತಿಹಾಸಿಕ ಶ್ರೀ ಗುರು ತಿಪ್ಪೇಸ್ವಾಮಿ ದೇಗುಲದಲ್ಲಿ ಗುರುವಾರ ಹುಂಡಿ ಎಣಿಕೆ ಹಣ ಮಾಡಲಾಗಿದ್ದು, ಒಟ್ಟು 25,54,344 ರೂ. ಸಂಗ್ರಹವಾಗಿದೆ ಸಂಗ್ರಹವಾಗಿದೆ.

ಬೆಳಗ್ಗೆ ಹುಂಡಿ ಎಣಿಕೆ ಪ್ರಾರಂಭಿಸಲಾಗಿತ್ತು. ಹೊರಮಠದ ಹುಂಡಿಯಲ್ಲಿ 5,15,509 ರೂ., ಒಳಮಠದಲ್ಲಿ 18,82,105 ರೂ. ದಾಸೋಹ ನಿಧಿ 1,57,344 ರೂ. ಸಂಗ್ರಹವಾಗಿದೆ.

ಜಾತ್ರೆ ಆರಂಭಕ್ಕೂ ಮುನ್ನ ಹಾಗೂ ಜಾತ್ರೆ ನಂತರ ಹುಂಡಿ ಎಣಿಕೆ ಮಾಡಲಾಗುತ್ತದೆ. ಕಳೆದ ವರ್ಷ ಜಾತ್ರೆಗೂ ಮುಂಚೆ ನಡೆದ ಎಣಿಕೆಯಲ್ಲಿ 16,45,095 ಲಕ್ಷ ರೂ. ಸಂಗ್ರಹವಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಎಣಿಕೆಯಲ್ಲಿ ಎಂಟು ಲಕ್ಷ ರೂ. ಹೆಚ್ಚಿಗೆ ಸಂಗ್ರಹವಾಗಿದೆ.

ಎಣಿಕೆ ಕಾರ್ಯದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ, ಉಪ ತಹಸೀಲ್ದಾರ್ ಟಿ.ಜಗದೀಶ್, ದೇವಸ್ಥಾನದ ಸಿಇಒ ಎಸ್.ಪಿ.ಬಿ.ಮಹೇಶ್, ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್, ಸದಸ್ಯರಾದ ಹಂಸವೇಣಿ, ಲಲಿತಮ್ಮ, ಎಸ್.ವಿ.ತಿಪ್ಪೇಸ್ವಾಮಿ ರೆಡ್ಡಿ, ರುದ್ರಮುನಿ, ಗೋವಿಂದರಾಜು, ಕೆ.ನಾಗಪ್ಪ, ಮುನಿಯಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಈಶ್ವರಪ್ಪ, ಎಚ್.ಹಾಲಪ್ಪ, ವಿರೂಪಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net