

ನಾಯಕನಹಟ್ಟಿ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಪಪಂ ಕಚೇರಿ: ಮುಖ್ಯಾಧಿಕಾರಿ ಡಿ. ಭೂತಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸದಸ್ಯರಾದ ಟಿ. ಬಸಣ್ಣ, ಉಮಾಪತಿ, ಮನ್ಸೂರ್, ಕೃಷ್ಣಮೂರ್ತಿ, ಮಹಾಂತಣ್ಣ, ಜೆ.ಆರ್. ರವಿಕುಮಾರ್, ವಿವಿಧ ಪಕ್ಷಗಳ ಮುಖಂಡರಿದ್ದರು.
ನಂತರ ಪೌರಕಾರ್ಮಿಕರಿಗೆ ಸಂಸದ ಎ. ನಾರಾಯಣಸ್ವಾಮಿ ಪರವಾಗಿ ಮಂಡಲ ಅಧ್ಯಕ್ಷ ರಾಮರೆಡ್ಡಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಶಿವದತ್ತ, ವೇಣುಗೋಪಾಲ್ ಮತ್ತಿತರರಿದ್ದರು.
ಬಿಜೆಪಿ ಕಾರ್ಯಾಲಯ: ಮಂಡಲ ಅಧ್ಯಕ್ಷ ಈ.ರಾಮರೆಡ್ಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯದರ್ಶಿ ಶಿವಣ್ಣ, ಯುವ ಮೋರ್ಚಾ ಕಾರ್ಯದರ್ಶಿ ಬೋರಸ್ವಾಮಿ, ತ್ರಿಶೂಲ್ ಕುಮಾರ್, ಪಿ.ಬಿ. ತಿಪ್ಪೇಸ್ವಾಮಿ, ವೇಣುಗೋಪಾಲ್, ಶಾರದಮ್ಮ, ಪರಮೇಶ್ವರ, ಕೌಸರ್ ಇದ್ದರು.
ಅಂಬೇಡ್ಕರ್ ವೃತ್ತ: ಪಪಂ ಮುಖ್ಯಾಧಿಕಾರಿ ಡಿ. ಭೂತಪ್ಪ, ಸದಸ್ಯರಾದ ಉಮಾಪತಿ, ಜೆ.ಆರ್. ರವಿಕುಮಾರ್, ಕೃಷ್ಣಮೂರ್ತಿ, ಮುಖಂಡರಾದ ಶ್ರೀಕಾಂತ್, ವಿಶ್ವನಾಥ್, ಹೊಸಹಳ್ಳಿ ತಿಪ್ಪೇಸ್ವಾಮಿ ಇತರರಿದ್ದರು.