ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಬಿಗಿಯಾಗಿರಲಿ

NYK CHEK POST 17
Published on

ನಾಯಕನಹಟ್ಟಿ: ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಬಿಗಿಗೊಳಿಸಿ. ಪಾಸ್‌ರಹಿತ ಯಾವ ವಾಹನವನ್ನೂ ಬಿಡಬೇಡಿ ಎಂದು ಚೆಕ್‌ಪೋಸ್ಟ್ ನೋಡಲ್ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಆಗಿರುವ ಕೆ.ಎಸ್.ಸುರೇಶ್ ಸೂಚಿಸಿದರು.

ಭಾನುವಾರ ಪಟ್ಟಣದ ಜಗಳೂರು ರಸ್ತೆಯ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.

ಈ ರಸ್ತೆಯಲ್ಲಿ ಅಂತಾರಾಜ್ಯ ವಾಹನಗಳ ಓಡಾಟ ಹೆಚ್ಚು. ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ 13 ಇರುವುದರಿಂದ ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ವಾಹನಗಳು ಒಳದಾರಿಯಲ್ಲಿ ಸಾಗಿ ಹಿರಿಯೂರು ಎನ್‌ಎಚ್4 ತಲುಪುತ್ತವೆ. ಈ ಬಗ್ಗೆ ನಿಗಾ ಇರಬೇಕು. ಇಲ್ಲಿ ಸಿಸಿ ಟಿವಿ ಇದೆ. ತಪಾಸಣೆ ಇಲ್ಲದೆ ಸಾಗುವ ವಾಹನ ನೋಡಬಹುದಾಗಿದೆ. ಹೀಗಾಗಿ ಎಚ್ಚರದಿಂದ ಕೆಲಸ ಮಾಡಿ. ತಪಾಸಣೆ ವೇಳೆ ದೈಹಿಕ ಅಂತರ ಕಾಯ್ದುಕೊಳ್ಳಿ ಎಂದು ಸೂಚಿಸಿದರು.

ಗೌಡಗೆರೆ ಗ್ರಾಪಂ ಸಿಬ್ಬಂದಿ, ಪೊಲೀಸರು, ಶಿಕ್ಷಣ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net