ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ವಿದೇಶಿ ಕಾಣಿಕೆ: ಹುಂಡಿಯಲ್ಲಿ ಡಾಲರ್, ಬೆಳ್ಳಿ ಆಭರಣ

nkt
Published on
ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಗಳ ಕಾಣಿಕೆ ಹುಂಡಿಗಳನ್ನು ಬುಧವಾರ ಎಣಿಕೆ ಮಾಡಲಾಗಿದ್ದು, ಒಟ್ಟು ₹58,74,550 ಸಂಗ್ರಹವಾಗಿದೆ.

ಕಳೆದ ವರ್ಷದ ಇದೇ ಅವಧಿಯ ಸಂಗ್ರಹಕ್ಕೆ ಹೋಲಿಸಿದರೆ, ಈ ಬಾರಿ ₹13 ಲಕ್ಷ ಹೆಚ್ಚು ಹಣ ದೇಗುಲದ ಹುಂಡಿಗೆ ಬಂದಿದೆ.

ಬೆಳಗ್ಗೆ 10 ಗಂಟೆಗೆ ಮುಜರಾಯಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಆರಂಭವಾಯಿತು.
  • ಹೊರಮಠದಲ್ಲಿ: ₹14,09,855
  • ಒಳಮಠದಲ್ಲಿ: ₹44,64,695
  • ಒಟ್ಟು ಸಂಗ್ರಹ: ₹58,74,550
ಜಾತ್ರೆ ನಂತರ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು, 2024ರ ಇದೇ ಅವಧಿಯಲ್ಲಿ ₹45,19,772 ಸಂಗ್ರಹವಾಗಿತ್ತು. ಈ ಬಾರಿ ಭಕ್ತರಿಂದ ಸುಮಾರು ₹13 ಲಕ್ಷ ಹೆಚ್ಚು ಹಣ ದೇವಾಲಯಕ್ಕೆ ಸಂದಾಯವಾಗಿದೆ.

ವಿದೇಶಿ ಕರೆನ್ಸಿ ಮತ್ತು ಆಭರಣಗಳು ಪತ್ತೆ

ದೇವಾಲಯದ ಹುಂಡಿ ಎಣಿಕೆ ವೇಳೆ ಹಲವು ಆಸಕ್ತಿಕರ ವಸ್ತುಗಳು ಪತ್ತೆಯಾಗಿವೆ.
  • ಅಮೆರಿಕಾ ದೇಶದ ಒಂದು ಡಾಲರ್
  • ಶ್ರೀಲಂಕಾ ಮತ್ತು ಜರ್ಮನಿ ದೇಶದ ಕಾಯಿನ್‌ಗಳು
  • ಒಂಭತ್ತು ಗ್ರಾಂನಷ್ಟು ಗಟ್ಟಿ ಚಿನ್ನ
  • ಹಲವು ಬೆಳ್ಳಿಯ ನಾಣ್ಯಗಳು, ತೊಟ್ಟಿಲುಗಳು ಹಾಗೂ ಇತರೆ ಆಭರಣಗಳು ದೊರೆತಿವೆ.
ಸಂಗ್ರಹವಾದ ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ, ಶಿರಸ್ತೇದಾರ್ ಸದಾಶಿವಪ್ಪ, ಕಂದಾಯ ಇಲಾಖೆ ಸಿಬ್ಬಂದಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರತನ್‌ಕುಮಾರ್, ಸಹಾಯಕ ವ್ಯವಸ್ಥಾಪಕ ರತ್ನಕುಮಾರ್ ಸೇರಿದಂತೆ ದೇಗುಲ ಮತ್ತು ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net