ಶುಚಿತ್ವಕ್ಕೆ ಆದ್ಯತೆ ಕರೊನಾಕ್ಕೆ ಮದ್ದು

NYK SIMPADANE 26
Published on

ನಾಯಕನಹಟ್ಟಿ: ಎಲ್ಲರೂ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ ಕರೊನಾ ಹತೋಟಿಗೆ ಸಹಕರಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಮನವಿ ಮಾಡಿದರು.

ಪಟ್ಟಣದ ವಿವಿಧ ವಾರ್ಡ್ ಹಾಗೂ ಸಾರ್ವಜನಿಕ ಸ್ಥಳಗಳು, ಚರಂಡಿಗಳಲ್ಲಿ ಭಾನುವಾರ ಹೈಡ್ರೋಕ್ಲೋರಿನೇಷನ್ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿ, ಕರೊನಾ ವೈರಸ್ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.

ಪಪಂ ಆರೋಗ್ಯ ನಿರೀಕ್ಷಕ ರುದ್ರಮುನಿ ಮಾತನಾಡಿ, ಪಟ್ಟಣದ 16 ವಾರ್ಡ್, ಪ್ರಮುಖ ರಸ್ತೆ, ಚರಂಡಿಗಳಿಗೆ ಹೈಡ್ರೋಕ್ಲೋರಿನೇಷನ್ ದ್ರಾವಣ ಸಿಂಪಡಿಸಲಾಗುತ್ತಿದೆ. ಜನರು ಮನೆ ಮತ್ತು ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ಪಪಂ ಸದಸ್ಯರಾದ ಕೆ.ಎನ್.ಮಹಾಂತಣ್ಣ, ಎಸ್.ಕೃಷ್ಣಮೂರ್ತಿ, ಮಹಮ್ಮದ್ ಮನ್ಸೂರ್, ಗಿರಿಜಮ್ಮ, ಜೆ.ಟಿ.ಎಸ್.ತಿಪ್ಪೇಸ್ವಾಮಿ, ಜೆ.ಆರ್.ರವಿಕುಮಾರ್, ಎಸ್.ಉಮಾಪತಿ, ಮುಖಂಡರಾದ ಶ್ರೀಕಾಂತ್, ಸೈಯದ್ ಕೌಸರ್, ನಾಗರಾಜ್, ಓಬಣ್ಣ, ವಿಶ್ವನಾಥ್,ತಿಪ್ಪೇರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net