

ನಾಯಕನಹಟ್ಟಿ: ಮಾ.12ರಂದು ಜರುಗಲಿರುವ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಜಾತ್ರೆ ಯಶಸ್ವಿಗೊಳಿಸುವಂತೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಒಳಮಠದ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಪುಣ್ಯಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವಂತಹ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಿ ಎಂದು ತಿಳಿಸಿದರು.
ಮುಖ್ಯವಾಗಿ ಪಟ್ಟಣದ ತೇರುಬೀದಿ, ರಾಜ್ಯ ಹೆದ್ದಾರಿ ಕಾಮಗಾರಿ ಬೇಗನೆ ಮುಗಿಸಿ. ಬೆಸ್ಕಾಂ ಹಾಗೂ ಪಪಂ ಅಧಿಕಾರಿಗಳು ಶೀಘ್ರವೇ ಸಭೆ ಸೇರಿ ತಾಂತ್ರಿಕ ತೊಂದರೆ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ 79 ಕೊಳವೆ ಬಾವಿಗಳಿದ್ದು, 20 ಕೆಟ್ಟು ಹೋಗಿದ್ದು, 59 ಕಾರ್ಯ ನಿರ್ವಹಿಸುತ್ತಿವೆ. ಪ್ರತೀ ವರ್ಷದಂತೆ ಈ ಬಾರಿಯೂ ಪಂಪ್‌ಸೆಟ್‌ನಿಂದ ನೀರು ಪಡೆದು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವಿನೋತ್‌ಪ್ರಿಯಾ ಮಾತನಾಡಿ, ಜಾತ್ರಾ ಸಮಯದಲ್ಲಿ ಪ್ರಸಾದ ವಿತರಣೆ ಮಾಡುವವರು ದೇವಸ್ಥಾನ ಸಮಿತಿ ಮೂಲಕ ಡಿಸಿ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಸಾರಿಗೆ ಅಧಿಕಾರಿ ಪ್ರಭು ಮಾತನಾಡಿ, ಈ ಬಾರಿ 190 ಬಸ್‌ಗಳನ್ನು ಓಡಿಸುವ ಯೋಜನೆ ರೂಪಿಸಲಾಗಿದೆ ಎದು ತಿಳಿಸಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮಾತನಾಡಿ, ಮೂರು ದಿನಗಳ ಕಾಲ ನಾಲ್ಕು ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ಅಗತ್ಯ ಸಿಬ್ಬಂದಿ ನಿಯೋಜಿಸುವುದಾಗಿ ಹೇಳಿದರು.
ಸಚಿವ ಶ್ರೀರಾಮುಲು, ಎಂಎಲ್ಸಿ ಜಯಮ್ಮ ಬಾಲರಾಜ್, ತಹಸೀಲ್ದಾರ್ ಮಲ್ಲಿಕಾರ್ಜುನ್, ಡಿವೈಎಸ್‌ಪಿ ರೋಷನ್ ಜಮೀರ್, ಜಿಪಂ ಸದಸ್ಯೆ ಓಬಳೇಶ, ಮಂಜುನಾಥ್, ದೇವಸ್ಥಾನ ಇಒ ಎಸ್.ಪಿ.ಬಿ.ಮಹೇಶ್, ಸಮಿತಿ ಅಧ್ಯಕ್ಷ ರವಿಶಂಕರ್, ಮುಖಂಡ ಎಂವೈಟಿ ಸ್ವಾಮಿ ಮತ್ತಿತರರಿದ್ದರು.