ಶಂಕಿತರ ಕ್ವಾರಂಟೈನ್‌ಗೆ ವಿರೋಧ

NYK PROTEST 21
Published on

ನಾಯಕನಹಟ್ಟಿ: ಕರೊನಾ ಶಂಕಿತ ಕುಟುಂಬವನ್ನು ಮಹದೇವಪುರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿರುವುದನ್ನು ವಿರೋಧಿಸಿ ಎನ್.ಮಹದೇವಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಪಂ ಅಧ್ಯಕ್ಷ ಪಿ.ಜಿ.ಬೋರನಾಯಕ ಮಾತನಾಡಿ, ಶುಕ್ರವಾರ ಮುಂಬೈನಿಂದ ನಾಯಕನಹಟ್ಟಿಗೆ ಐವರು ಬಂದಿದ್ದು, ಇವರನ್ನು ಅವರ ಮನೆಯಲ್ಲಿಡುವ ಬದಲು ಎನ್.ಮಹದೇವಪುರ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕ್ಯಾರಂಟೈನ್‌ನಲ್ಲಿಟ್ಟಿದ್ದು, ಇದರಿಂದ ಗಿಡ್ಡಾಪುರ, ಎನ್.ಮಹದೇವಪುರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ ಎಂದರು.

ಎಎಸ್‌ಐ ನಾಗರಾಜ ಮತ್ತು ತಿಪ್ಪೇಸ್ವಾಮಿ ಸ್ಥಳಕ್ಕೆ ಧಾವಿಸಿ, ಪ್ರತಿಭಟನಾನಿರತರಿಗೆ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟರು. ಇದರಿಂದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಗ್ರಾಮಸ್ಥ ಬಿ.ಬೋರಯ್ಯ, ಗ್ರಾಮಸ್ಥರಾದ ಬಿ.ಗೋವಿಂದ, ಆರ್.ಪಾಲಯ್ಯ, ಡಿ.ಟಿ.ಬೋರಯ್ಯ, ಚಾಂದ್‌ಬಾಷ, ಕಾಮಯ್ಯ, ಶಾಂತರಾಜ್, ಮಂಜುನಾಥ್, ಕೆ.ರಾಮಣ್ಣ, ಕ್ಯಾತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net