ನಾಯಕನಹಟ್ಟಿಯಲ್ಲಿ ಕುಂಭಗಳ ಮೆರವಣಿಗೆ: ತಿಪ್ಪೇಶನಿಗೆ ಸಹಸ್ರ ಬಿಲ್ವಾರ್ಚನೆ

NYK VEERABADRA 27
Published on

ಚಿತ್ರದುರ್ಗ : ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಶನಿವಾರ 101 ಕುಂಭಗಳ ಮೆರವಣಿಗೆ, ಕುಂಭಾಭಿಷೇಕ ಮಹೋತ್ಸವ, ಗುರು ತಿಪ್ಪೇರುದ್ರಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ಸಕಲ ಪೂಜಾ ವಿಧಿವಿಧಾನಗಳೊಂದಿಗೆ ವಾದ್ಯಗಳು ಹಾಗೂ ದೇಗುಲದ ಬಾವುಟದೊಂದಿಗೆ ಹೊರಮಠಕ್ಕೆ ಬರಲಾಯಿತು. ಹೊರಮಠದ ದೇಗುಲದ ಪ್ರಾಂಗಣದಲ್ಲಿ ದೇವಸ್ಥಾನ ಸಮಿತಿಯವರು ಗ್ರಾಮಸ್ಥರು, ಕುಂಭಗಳಿಗೆ ಪೂಜಾ ವಿಧಿವಿಧಾನಗಳನ್ನು ನಡೆಸಿದರು.

ಶ್ರಾವಣ ಮಾಸದ ಕೊನೆಯ ದಿನವಾದ್ದರಿಂದ ಕ್ಷೇತ್ರ ದರ್ಶನಕ್ಕೆ ಬಂದಂತಹ ಸಾವಿರಾರು ಭಕ್ತರಿಗೆ ಚಳ್ಳಕೆರೆಯ ಬಿ.ಟಿ.ಅಂಡ್ ಕೋ, ದಾವಣಗೆರೆಯ ಹೊಂಡದ ರಸ್ತೆಯ ತಿಪ್ಪೇಸ್ವಾಮಿ ಪ್ರಾವಿಜನ್ ಸ್ಟೋರ್, ಜಗಳೂರಿನ ಸುಮಾ, ಬಿ.ಕೆ.ರಮೇಶ್ ದಾಸೋಹ ವ್ಯವಸ್ಥೆ ಮಾಡಿದ್ದರು.

ತಹಸೀಲ್ದಾರ್ ಎನ್.ರಘುಮೂರ್ತಿ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಹಾಗೂ ನೂರಾರು ಮಹಿಳೆಯರು, ಸಾವಿರಾರು ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net