ಜನತಾ ಕರ್ಪ್ಯೂಗೆ ಪುಣ್ಯಕ್ಷೇತ್ರ ಹಟ್ಟಿ ಸ್ತಬ್ಧ

NYK JANATHA 22
Published on

ನಾಯಕನಹಟ್ಟಿ: ಜನತಾ ಕರ್ಪ್ಯೂಗೆ ಪಟ್ಟಣ ಸೇರಿ ಹೋಬಳಿಯಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ಬೆಳಗ್ಗೆಯಿಂದಲೇ ಆಟೋ, ಬಸ್ ಸಂಚಾರ ಸ್ಥಗಿತಗೊಂಡಿದ್ದವು. ಬೆರಳೆಣಿಕೆ ಬೈಕ್‌ಗಳ ಓಡಾಟ ಬಿಟ್ಟರೆ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಎರಡ್ಮೂರು ಔಷಧ ಅಂಗಡಿ ಮಾತ್ರ ಬಾಗಿಲು ತೆರೆದಿದ್ದವು.

ಮುಜರಾಯಿ ಇಲಾಖೆ ಆದೇಶದಂತೆ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನವನ್ನು ಶನಿವಾರವೇ ಮುಚ್ಚಲಾಗಿತ್ತು. ಪಟ್ಟಣದ ತೇರು ಬೀದಿ, ಜೆ.ಸಿ.ರಸ್ತೆ, ಸಂತೇ ಮೈದಾನ ಇತರ ಪ್ರದೇಶಗಳು ಜನರಿಲ್ಲದೆ ಭಣಗುಡುತ್ತಿದ್ದವು.

ಹೋಬಳಿಯ ನೇಲಗೇತನಹಟ್ಟಿ, ಗೌಡಗೆರೆ, ಅಬ್ಬೇನಹಳ್ಳಿ, ಮಲ್ಲೂರಹಳ್ಳಿ, ತಿಮ್ಮಪ್ಪನಹಳ್ಳಿ, ಎನ್.ದೇವರಹಳ್ಳಿ, ನೇರಲಗುಂಟೆ ಗ್ರಾಪಂ ಮತ್ತು ತಳಕು ಹೋಬಳಿ ಎಲ್ಲ ಹಳ್ಳಿಗಳಲ್ಲೂ ಕರ್ಫ್ಯೂಗೆ ಬೆಂಬಲ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net