

ನಾಯಕನಹಟ್ಟಿ: ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದು ತಿಳಿಯುತ್ತಿದ್ದಂತೆ ಮದ್ಯ ಪ್ರಿಯರು ಸೋಮವಾರ ಮುಂಜಾನೆಯಿಂದಲೇ ಮದ್ಯದ ಅಂಗಡಿ ಮುಂದೆ ಸಾಲುಗಟ್ಟಿದ್ದರು.
ವೈನ್ ಷಾಪ್ ಮಾಲೀಕರು ಬ್ಯಾರಿಕೇಡ್ ವ್ಯವಸ್ಥೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಹಾಕಿದ್ದರು. ಬಂದಂತಹ ಗಿರಾಕಿಗಳಿಗೆ ಸ್ಯಾನಿಟೈಸರ್ ಹಾಕಿ ಬಾರ್‌ನ ಬಾಗಿಲ ಬಳಿ ಕಳುಹಿಸಿ ಒಬ್ಬರಿಗೆ ಎರಡು ಬಾಟಲಿಯಂತೆ ಮಾರಾಟ ಮಾಡಿ ಕಳುಹಿಸುತ್ತಿದ್ದರು.
ಎಂಎಸ್‌ಐಎಲ್ ಮಳಿಗೆ: ಹೋಬಳಿಯ ತೊರೆಕೋಲಮ್ಮನಹಳ್ಳಿಯಲ್ಲಿ ಎಂಎಸ್‌ಐಎಲ್ ಮಳಿಗೆ ಮುಂದೆಯೂ ದೊಡ್ಡ ಸರತಿ ಸಾಲು ಕಂಡುಬಂದಿತು. ಇಲ್ಲಿಗೆ ಕೂಡ್ಲಿಗಿ ತಾಲೂಕು ಹತ್ತಿರವಾದ್ದರಿಂದ ಕಲ್ಲಹಳ್ಳಿ, ಮಾಳೇಹಳ್ಳಿ, ತಿಪ್ಪೇಹಳ್ಳಿ, ಸೇರಿ ಕೂಡ್ಲಿಗಿ ತಾಲೂಕಿನ ಕೆಲವು ಹಳ್ಳಿಗಳಿಂದ ಬಂದು ಮದ್ಯ ಖರೀದಿ ಮಾಡಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.
ಎರಡು ಮದ್ಯದ ಅಂಗಡಿಗಳ ಮುಂದೆ ಯಾವುದೇ ಗಲಾಟೆಗಳಾಗದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.