

ನಾಯಕನಹಟ್ಟಿ: ನಾಯಕನಹಟ್ಟಿ ಜಾತ್ರೆ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ತಾತ್ಕಾಲಿಕವಾಗಿ ಬಸ್ ನಿಲ್ದಾಣಗಳಿಂದ ದೇವಾಲಯಕ್ಕೆ ಕಡಿಮೆ ದರದಲ್ಲಿ ಆಟೋ ಸೇವೆ ಒದಗಿಸಬೇಕು ಎಂದು ಪಿಎಸ್‌ಐ ರಘುನಾಥ್ ಸೂಚಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಏರ್ಪಡಿಸಿದ್ದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿ, ಮಾ.12ರಂದು ನಡೆಯುವ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ ಎಂದರು.
ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಟ್ಟಣದಿಂದ ಎರಡು ಕಿಮೀ ದೂರದಲ್ಲಿ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಸುತ್ತಲಿನ ಮೂರು ಕಿ.ಮೀ ಪ್ರದೇಶದಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.
ಪ್ರೊಬೇಷನರಿ ಪಿಎಸ್‌ಐ ರಮೇಶ್, ಸಿಬ್ಬಂದಿ ತಿಲಕ್ ರಾಜ್, ಆಟೋ ಚಾಲಕರ ಸಂಘದ ಮಹಾಂತೇಶ್, ತಿಪ್ಪೇಸ್ವಾಮಿ ಹುಸೇನ್ ಮತ್ತಿತರರಿದ್ದರು.