ಮಣ್ಣಿನ ದಿಬ್ಬ ಕುಸಿದು ಯುವಕರಿಬ್ಬರ ಸಾವು

nayakanahatti death mound collapse
Published on

ನಾಯಕನಹಟ್ಟಿ: ಸಮೀಪದ ಮನಮೈನಹಟ್ಟಿ ಗ್ರಾಮದಲ್ಲಿ ಬುಧವಾರ ಮಣ್ಣು ತೆಗೆಯುವಾಗ ದಿಬ್ಬ ಕುಸಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ನಂದೀಶ ನಾಯ್ಕ (34), ಹರೀಶ್ (24) ಮೃತರು. ಗ್ರಾಮದ ಪಕ್ಕದಲ್ಲಿರುವ ಹಳ್ಳದ ಬಳಿ ಆಳವಾದ ಗುಂಡಿಯಿಂದ ಮಣ್ಣು ತೆಗೆದು ಎತ್ತಿನ ಗಾಡಿಗೆ ತುಂಬಲಾಗುತ್ತಿತ್ತು. ಭಾರಿ ಪ್ರಮಾಣದ ಮಣ್ಣು ದಿಢೀರನೆ ಕುಸಿದಿದೆ. ತಕ್ಷಣ ಸ್ಥಳದಲ್ಲಿದ್ದವರು ಯುವಕರನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ. ಮಣ್ಣಿನ ಪ್ರಮಾಣ ಹೆಚ್ಚಿದ್ದರಿಂದ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net