

ನಾಯಕನಹಟ್ಟಿ: ಕರೊನಾ ರಜಾವಧಿಯ ಅಕ್ಷರ ದಾಸೋಹದ ದಾಸ್ತಾನನ್ನು ಚಳ್ಳಕೆರೆ ತಾಲೂಕಿನ 451 ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಎಲ್ಲ ಮಕ್ಕಳ ಮನೆ ಮನೆಗೆ ತೆರಳಿ ವಿತರಣೆ ಮಾಡಲಾಗಿದೆ.
ಮಾ.14ರಿಂದ ಏ.9ರ ವರೆಗೆ ಒಟ್ಟು 21 ದಿನದ ಆಹಾರ ಧಾನ್ಯವನ್ನು ನೀಡಲಾಗಿದೆ. ಒಂದು ವಾರದಿಂದ ವಿತರಣೆ ಕಾರ್ಯ ಮಾಡುತ್ತಿದ್ದು, ಬಹುತೇಕ ಎಲ್ಲ ಶಾಲೆಗಳ ಮಕ್ಕಳ ಮನೆಗಳಿಗೆ ಅಕ್ಕಿ, ಬೇಳೆ ತಲುಪಿಸಲಾಗಿದೆ.
ಚಳ್ಳಕೆರೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿಕೆ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಸೂಚನೆಯಂತೆ ಚಳ್ಳಕೆರೆ ತಾಲೂಕಿನ ಶಾಲೆ, ಅಕ್ಷರ ದಾಸೋಹದ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳ ಮನೆಗೆ ತೆರಳಿ ಅವರಿಗೆ ದೊರಕಬೇಕಿದ್ದ ಅಕ್ಕಿ, ಬೇಳೆ ತಲುಪಿಸಿದ್ದಾರೆ.