ಹುಂಡೀಲಿ 30.03 ಲಕ್ಷ ರೂ. ಸಂಗ್ರಹ

NY HUNDI 06
Published on

ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿ ಹಣವನ್ನು ಮಂಗಳವಾರ ಮತ್ತು ಬುಧವಾರ ಎಣಿಕೆ ಮಾಡಲಾಗಿದ್ದು, ಒಟ್ಟು 30,03,734 ಲಕ್ಷ ರೂ. ಸಂಗ್ರಹವಾಗಿದೆ.

ಒಳಮಠದ ಹುಂಡಿಗಳಲ್ಲಿ 22,23,516 ರೂ, ಹೊರಮಠದ ಹುಂಡಿಗಳಲ್ಲಿ 7,80,218 ರೂ. ಸೇರಿ ಒಟ್ಟು ಎರಡೂ ದೇಗುಲಗಳಿಂದ 30,03,734 ರೂ. ದೇಣಿಗೆ ಹಣ ಸಂಗ್ರಹವಾಗಿದೆ. ಜಾತ್ರೆಗೆ ಮುಂಚೆ ಫೆ.27ರಂದು ಹುಂಡಿ ಹಣ ಎಣಿಕೆ ಮಾಡಲಾಗಿತ್ತು.

ಲಾಕ್‌ಡೌನ್‌ನಿಂದ ದೇವಾಲಯವನ್ನು ಮಾ.22ರ ವರೆಗೆ ಮುಚ್ಚಲಾಗಿತ್ತು. ಜಿಲ್ಲಾಡಳಿತದ ಆದೇಶದ ಮೇರೆಗೆ ಮಂಗಳವಾರ ಹುಂಡಿ ಹಣ ಎಣಿಕೆಗೆ ಚಾಲನೆ ನೀಡಲಾಗಿತ್ತು. ಈ ಕಾರ್ಯ ಬುಧವಾರ ಪೂರ್ಣಗೊಂಡಿತು. ದೈಹಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಹುಂಡಿ ಹಣ ಎಣಿಸಲಾಯಿತು.

ಹುಂಡಿಯಲ್ಲಿ ಬಂಗಾರ ಹಾಗೂ ಬೆಳ್ಳಿ ವಸ್ತುಗಳು ಕಂಡುಬಂದಿವೆ. ಹಣ ಎಣಿಕೆ ಕಾರ್ಯವನ್ನು ವೀಡಿಯೋ ಚಿತ್ರೀಕರಿಸಲಾಯಿತು. ಸಾಮಾನ್ಯವಾಗಿ ಒಂದು ದಿನಕ್ಕೆ ಮುಗಿಸಬೇಕಿದ್ದ ಹಣ ಎಣಿಕೆ ಕಾರ್ಯವನ್ನು ಕರೊನಾ ಕಾರಣ ಎರಡು ದಿನ ನಡೆಸಲಾಯಿತು.

ದೇವಾಲಯದ ಇಒ ಎಸ್.ಪಿ.ಬಿ.ಮಹೇಶ್, ಅಧ್ಯಕ್ಷ ಜೆ.ಪಿ.ರವಿಶಂಕರ್, ಉಪ ತಹಸೀಲ್ದಾರ್ ಟಿ.ಜಗದೀಶ್, ಗ್ರಾಮಲೆಕ್ಕಾಧಿಕಾರಿ ಉಮಾ, ಸಮಿತಿ ಸದಸ್ಯರಾದ ಎಸ್.ವಿ.ಟಿ.ರೆಡ್ಡಿ, ಎನ್.ಬಿ.ಮುನಿಯಪ್ಪ, ನಾಗಣ್ಣ, ರುದ್ರಮುನಿ, ಗೋವಿಂದರಾಜ್, ಹಂಸವೇಣಿ, ಲಲಿತಮ್ಮ, ಸಿಬ್ಬಂದಿ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net