ಹೊಸಗುಡ್ಡದಲ್ಲಿ ಪಲ್ಲಕ್ಕಿ ಉತ್ಸವ

NYK HABBA 22
Published on

ನಾಯಕನಹಟ್ಟಿ: ಶಿವರಾತ್ರಿ ಪ್ರಯುಕ್ತ ಐತಿಹಾಸಿಕ ಹೊಸಗುಡ್ಡದ ಗುಹಾಂತರ ದೇವಾಲಯದಲ್ಲಿ ರಾಮಲಿಂಗೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ಮುಂಜಾನೆಯೇ ಹಬ್ಬದ ಕಳೆ ಕಟ್ಟಿತ್ತು. ಸಂಜೆ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಜಾನಪದ ವಾದ್ಯಗಳ ಮೂಲಕ ಮಹಿಳೆಯರು ಮಕ್ಕಳು ಸೇರಿ ಗ್ರಾಮಸ್ಥರು ಹರನಾಮ ಸ್ಮರಣೆ ಮಾಡಿದರು. ಪಟ್ಟದ ಗೂಳಿಯೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ದೇವರನ್ನು ಹೊಸಗುಡ್ಡದ ಗುಹಾಂತರ ದೇವಾಲಯಕ್ಕೆ ಕರೆತರಲಾಯಿತು. ಉತ್ಸವ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ಕೆ.ಬೊಮ್ಮಯ್ಯ, ಮಾಜಿ ಅಧ್ಯಕ್ಷ ಬಂಗಾರಯ್ಯ, ಗ್ರಾಮಸ್ಥರಾದ ಬಡಕಲು ಓಬಯ್ಯ, ಎತ್ತಿನ ಓಬಯ್ಯ, ಗೌಡರ ಬಂಗಾರಯ್ಯ, ಗೊಂಚಿಕಾರ್ ಓಬಯ್ಯ, ಯಜಮಾನ್ ಓಬಯ್ಯ, ಪೂಜಾರಿ ಬೋರಯ್ಯ, ಚಿನ್ನಯ್ಯ, ಬೋರಯ್ಯ, ಚಂದ್ರಣ್ಣ, ಗೋಪಾಲಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net