ಮದಕರಿ ನಾಯಕ ಸಮಾಧಿ ಸ್ಥಳ ಅಭಿವೃದ್ಧಿ

9myk2
Published on

ಮಾಯಕೊಂಡ: ಮಾಯಕೊಂಡದಲ್ಲಿರುವ ಚಿತ್ರದುರ್ಗದ ಪಾಳೇಗಾರ ರಾಜವೀರ ಹಿರೇಮದಕರಿ ನಾಯಕರ ಸಮಾಧಿ ಸ್ಥಳವನ್ನು ಸದ್ಯದಲ್ಲೇ ಪ್ರವಾಸಿ ತಾಣವಾಗಿ ಸರ್ಕಾರ ಅಭಿವೃದ್ಧಿಗೊಳಿಸಲಿದೆ ಎಂಂದು ನಾಯಕ ಸಮಾಜದ ಮುಖಂಡ ಹೊದಿಗೆರೆ ರಮೇಶ್ ಹೇಳಿದರು.

ಕಳೆದ ತಿಂಗಳು ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಸಮಾಧಿ ಸ್ಥಳದ ಸಮಗ್ರ ಅಭಿವೃದ್ಧಿ, ಮದಕರಿ ನಾಯಕರ ಕುದುರೆಯ ಮೇಲಿನ ಪುತ್ಥಳಿ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದ್ದರು. ಸದ್ಯದಲ್ಲೇ ಅನುದಾನ ಬಿಡುಗಡೆ ಆಗಲಿದೆ ಎಂದು ಬುಧವಾರ ಮಾಹಿತಿ ನೀಡಿದ್ದಾರೆ.

ರಾಜವೀರ ಹಿರೇ ಮದಕರಿ ನಾಯಕ ಸಮಾಧಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿ,

ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಸುಮಾರು 3 ಕೋಟಿ ರೂ. ಗಿಂತ ಅಧಿಕ ಅನುದಾನ ಬೇಕಾಗಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಸಹಾಯಕ ಅಭಿಯಂತರ ಪರಮೇಶ್ವರಪ್ಪ, ಮದಕರಿ ನಾಯಕ ಸಮಾಧಿ ಸ್ಥಳ ಜೀಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಎಲ್. ಸುನಿಲ್, ನಾಯಕ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net