

ಮಡಿಕೇರಿ:
ಕೊಡಗಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆಯ ಆತಂಕ ಕಾಣಿಸಿಕೊಂಡಿದೆ. ಕೇರಳಕ್ಕೆ ಹೊಂದಿಕೊAಡAತಿರುವ ಜಿಲ್ಲೆಯ ಗಡಿಬಾಗದಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿAಗ್ ನಡೆಸಲಾಗುತ್ತಿದೆ. ಗಡಿಭಾಗದಲ್ಲಿ ಸೋಮವಾರ ಕೇರಳದ ವಿಶೇಷ ಪೊಲೀಸ್ ಪಡೆ ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಅತ್ತ ಕಡೆಯಿಂದ ನಕ್ಸಲರು ಜಿಲ್ಲೆಗೆ ನುಸುಳುವ ಸಾಧ್ಯತೆ ಇರುವುದರಿಂದ ತೀವ್ರ ನಿಗಾ ಇಡಲಾಗಿದೆ. ಕೊಡಗಿನ ನಕ್ಸಲ್ ಸೂಕ್ಷö್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಗಡಿಯಲ್ಲಿ ಬಂದೋಬಸ್ಥ್ ಬಿಗಿ ಮಾಡಲಾಗಿದೆ.
ಕೇರಳದ ಕಣ್ಣೂರು ಜಿಲ್ಲೆಗೆ ಹೊಂದಿಕೊAಡAತಿರುವ ಕೊಡಗಿನ ಗಡಿಭಾಗದಲ್ಲಿ ಜಿಲ್ಲೆಯಿಂದ ಕೇವಲ 4-5 ಕಿಮೀ ದೂರದಲ್ಲಿ ಬಿರುನಾಣಿ ಬಳಿ ಸೋಮವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಕೇರಳದ ವಿಶೇಷ ಪೊಲೀಸ್ ನಕ್ಸಲ್ ನಿಗ್ರಹ ಪಡೆ ಥಂಡರ್ ಬೋಲ್ಟ್ ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಒಬ್ಬ ನಕ್ಸಲನಿಗೆ ಗಾಯಗಳಾಗಿರುವುದಾಗಿ ಹೇಳಲಾಗಿದ್ದು, ಜಿಲ್ಲೆಯ ಶ್ರೀಮಂಗಲ ಮತ್ತು ಕುಟ್ಟ ವ್ಯಾಪ್ತಿಯ ಆಸ್ಪತ್ರೆ ಅಥವಾ ಔಷಧಿ ಅಂಗಡಿಗಳಿಗೆ ಆಗಮಿಸುವ ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ಕೊಡಗು ಪೊಲೀಸ್ ವತಿಯಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕಳೆದ ಮಂಗಳವಾರ ಕೇರಳದ ವೈನಾಡು ಜಿಲ್ಲೆಯ ತಳಪುಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಪಿರಿಯ ಅರಣ್ಯ ಪ್ರದೇಶದಲ್ಲಿ ಕೇರಳದ ಥಂಡರ್ ಬೋಲ್ಟ್ ಪೊಲೀಸರ ವಿಶೇಷ ಪಡೆ ಕೂಂಬಿAಗ್ ನಡೆಸುತ್ತಿರುವಾಗ ಚಪ್ಪರ ಕಾಲೋನಿ ಎಂಬಲ್ಲಿ ವಿಶೇಷಪಡೆಗೆ ಐವರು ನಕ್ಸಲರು ಎದುರಾಗಿದ್ದಾರೆ. ಈ ಸಂದರ್ಭ ಅವರನ್ನು ಪೊಲೀಸರು ಸುತ್ತುವರಿದಾಗ ಎರಡು ತಂಡಗಳ ಮಧ್ಯೆ ಗುಂಡಿನ ಚಕಮಕಿ ನಡೆದು ಮೂವರು ನಕ್ಸಲರು ತಪ್ಪಿಸಿಕೊಂಡಿದ್ದರು. ಇಬ್ಬರನ್ನ ಸೆರೆ ಹಿಡಿಯಲಾಗಿತ್ತು ಕೇರಳದ ನಕ್ಸಲ್ ಮುಖಂಡ ಚಂದ್ರು ಅಲಿಯಾಸ್ ತಿರು ವೆಂದಿಗA ಮತ್ತು ಕರ್ನಾಟಕದ ಶೃಂಗೇರಿಯ ಬೆಳಗೂಡು ಕೂಡಿಗೆಯ ಶ್ರೀಮತಿ ಅಲಿಯಾಸ್ ಉಣ್ಣಿಮಾಯ ಎಂಬವರನ್ನು ಕೇರಳ ಪೊಲೀಸರು ಬಂಧಿಸಿದ್ದರು.
ಈ ಬೆನ್ನಲ್ಲೇ ಮತ್ತೊಂದು ಪೊಲೀಸ್-ನಕ್ಸಲ್ ಮುಖಾಮುಖಿ ನಡೆದಿರುವುದು ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ಜೀವಂತವಾಗಿರುವುದಕ್ಕೆ ಪುರಾವೆ ನೀಡಿದಂತಾಗಿದೆ. ಕೇರಳದಲ್ಲಿ ಕಾರ್ಯಾಚರಣೆ ತೀವ್ರವಾಗುತ್ತಿದ್ದಂತೆಯೇ ಕರ್ನಾಟಕ ಭಾಗಕ್ಕೆ ನಕ್ಸಲರು ನುಸುಳುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿAಗ್ ನಡೆಸಲಾಗುತ್ತಿರುವುದಾಗಿ ಕೊಡಗು ಎಸ್.ಪಿ. ಕೆ. ರಾಮರಾಜನ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಕುಟ್ಟ ಗಡಿ ಭಾಗ ಮತ್ತು ಆ ವ್ಯಾಪ್ತಿಯಲ್ಲಿ ಬಿಗಿ ನಾಕಬಂದಿ ಹಾಕಲಾಗಿದೆ. ದಿನದ 24 ಗಂಟೆಯೂ ಬಿಗಿ ಪೊಲೀಸ್ ತಪಾಸಣಾ ಕಾರ್ಯ ನಡೆಸಲಾಗುತ್ತಿದ್ದು, ಅಗತ್ಯ ಇರುವ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಲಾಗಿದೆ. ಈ ಬೆನ್ನಲ್ಲೇ ಜಿಲ್ಲಾ ಎಸ್‌ಪಿ ಕೆ. ರಾಮರಾಜನ್ ಗಡಿಭಾಗದ ಬಿರುನಾಣಿ, ತೆರಾಲು, ಪರಕಟಗೇರಿ, ಕುಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವನ್ನು ಬಿಗಿಗೊಳಿಸಿ, ಕರ್ತವ್ಯದಲ್ಲಿರುವ ಪೊಲೀಸರಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.
ಬೀಟ್ ಮಟ್ಟದಲ್ಲಿ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಕ್ಸಲರು ಅಥವಾ ಸಂಶಯಾಸ್ಪದ ವ್ಯಕ್ತಿಗಳ ತಿರುಗಾಟದ ಬಗ್ಗೆ ನಿಗಾ ಇಡಲಾಗಿದ್ದು, ನಕ್ಸಲರು ಕೊಡಗಿಗೆ ಕಡೆಗೆ ಬಾರದಂತೆ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಕೊಡಗಿಗೆ ಹೊಂದಿಕೊAಡAತಿರುವ ಕೇರಳ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ಹೊಸದೇನೂ ಅಲ್ಲ. 2020ರ ನವೆಂಬರ್‌ನಲ್ಲಿ ಕೊಡಗು - ಕೇರಳ ಗಡಿಭಾಗದ ವಯನಾಡು ಅರಣ್ಯಭಾಗದಲ್ಲಿ ನಡೆದಿದ್ದ ಎನ್‌ಕೌಂಟರ್ ವೇಳೆ ವೇಲು ಮುರುಗನ್ ಎಂಬಾತನನ್ನು ಕೊಲ್ಲಲಾಗಿತ್ತು. ಇದಕ್ಕೂ ಮೊದಲು 2019ರ ಫೆಬ್ರವರಿಯಲ್ಲಿ ಕೇರಳದ ವಯನಾಡು ಜಿಲ್ಲೆಯ ಅರಣ್ಯದಂಚಿನ ರೆಸಾರ್ಟ್ ಒಂದರಲ್ಲಿ 10ಕ್ಕೂ ಅಧಿಕ ಮಂದಿ ಇದ್ದ ನಕ್ಸಲರ ತಂಡ ಕಂಡು ಬಂದಿತ್ತು. ಈ ವೇಳೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಒಬ್ಬ ನಕ್ಸಲ್ ಮೃತಪಟ್ಟಿದ್ದ.
ಮಲೆನಾಡು ಪ್ರದೇಶವಾದ ಕೊಡಗಿನ ಕೆಲ ಪ್ರದೇಶಗಳಲ್ಲೂ ಕಳೆದ ಒಂದು ದಶಕದಿಂದ ಆಗಾಗ್ಗೆ ನಕ್ಸಲ್ ಚಟುವಟಿಕೆ ವರದಿ ಆಗುತ್ತಿರುತ್ತದೆ. ವಿಧಾನಭೆ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸ್ವಗ್ರಾಮ ಕಾಲೂರು, 2013ರ ಫೆಬ್ರವರಿಯಲ್ಲಿ ಮಾಕುಟ್ಟ ಅರಣ್ಯ ಪ್ರದೇಶದ ಉಡುಂಬಿ, 2018ರ ಫೆಬ್ರವರಿಯಲ್ಲಿ ಸಂಪಾಜೆ, ಭಾಗಮಂಡಲ, ನಾಪೋಕ್ಲು ವ್ಯಾಪ್ತಿಯ ನಾಲಾಡಿ ಮತ್ತಿತರ ಭಾಗಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದರು. 2018ರಲ್ಲಿ 15 ದಿನಗಳ ಅಂತರದಲ್ಲಿ 2 ಬಾರಿ ಜಿಲ್ಲೆಯಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದರು.
ಕೇರಳ ಭಾಗದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಚುರುಕಾಗುತ್ತಿದ್ದಂತೆಯೇ ಅವರು ಕೊಡಗಿನ ಕಡೆಗೆ ನುಸುಳುವ ಸಾಧ್ಯತೆ ಹೆಚ್ಚಾಗಿದ್ದು ಕೊಡಗು ಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕರಿಕೆ, ತಲಕಾವೇರಿ, ಕಕ್ಕಬ್ಬೆ, ಮಾಕುಟ್ಟ, ಕುಟ್ಟ ಸೇರಿದಂತೆ ಕೇರಳ ಗಡಿಗೆ ಹೊಂದಿಕೊAಡAತೆ ಜಿಲ್ಲೆಯಲ್ಲಿ ವಿಶಾಲ ಅರಣ್ಯ ಪ್ರದೇಶವಿದ್ದು, ಆಯಕಟ್ಟಿನ ಜಾಗದಲ್ಲಿ ತೀವ್ರ ನಿಗಾ ಇಡಲಾಗಿದೆ. ಕೇರಳ ಕಡೆಯಿಂದ ನಕ್ಸಲರು ಜಿಲ್ಲೆಗೆ ನುಸುಳದಂತೆ ಅಗತ್ಯ ಕಟ್ಟೆಚ್ಚರ ವಹಿಸಲಾಗಿದೆ.
ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಈ ಭಾಗದಲ್ಲಿ ನಕ್ಸಲರು ತಮ್ಮ ಚಟುವಟಿಕೆ ಚುರುಕು ಮಾಡುತ್ತಾರೆ. ಈ ಹಿಂದಿನ ಲೋಕಸಭಾ ಚುನಾವಣೆ ವೇಳೆಯೂ ಇಂಥ ವಿದ್ಯಮಾನ ನಡೆದಿತ್ತು. ನಕ್ಸಲ್ ಸೂಕ್ಷö್ಮ ಪ್ರದೇಶಗಳಾದ ಭಾಗಮಂಡಲ, ನಾಪೋಕ್ಲು, ವಣಚಲು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಸ್ಥಳಗಳಲ್ಲಿ ಚುನಾವಣೆ ವೇಳೆ ನಕ್ಸಲ್ ನಿಗ್ರಹ ಪಡೆ ನಿಯೋಜಿಸುವುದೂ ಸಾಮಾನ್ಯವಾಗಿದೆ.
ಕೊಡಗು – ಕೇರಳ ಗಡಿ ಭಾಗದಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿAಗ್ ನಡೆಯುತ್ತಿದೆ. ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬೀಟ್ ಮಟ್ಟದಲ್ಲಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ನಕ್ಸಲರು ಬಂದು ಹೋಗಿದ್ದಾರಾ ಎನ್ನುವುದರ ಬಗ್ಗೆ ವಿಚಾರಿಸಿಕೊಳ್ಳಲಾಗುತ್ತಿದೆ. ಅಪರಿಚಿತರ ಬಗ್ಗೆಯೂ ನಿಗಾ ಇಡಲಾಗಿದೆ. ಆಸ್ಪತ್ರೆ, ಔಷಧಿ ಅಂಗಡಿಗಳನ್ನೂ ಅಲರ್ಟ್ ಮಾಡಲಾಗಿದೆ. ಹೆಚ್ಚುವರಿ ತಂಡವೂ ಆಗಮಿಸಿದೆ.