ಸಮುದ್ರಕ್ಕೆ ಬಿದ್ದು ನೌಕಾ ಅಧಿಕಾರಿ ಸಾವು

Ins-Suvarna-Deth-Navy-office
Published on

ಕಾರವಾರ: ನೌಕಾಸೇನೆಯ ಅಧಿಕಾರಿಯೊಬ್ಬ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.

ಕದಂಬ ನೌಕಾನೆಲೆಯಲ್ಲಿ ನಿಂತಿರುವ ಐಎನ್‌ಎಸ್ ಸುವರ್ಣ ನೌಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಪ್ರದೇಶ ರಾಜ್ಯದ ಖಾನಾಪುರ ಜಿಲ್ಲೆಯ ಧೀರಜ್ ಬ್ರಿಜ್ ಕಿಶೋರ ಪಾಂಡೆ (28) ಮೃತರು.
ಬಿಡುವಿನ ವೇಳೆಯಲ್ಲಿ ನೌಕೆಯಿಂದ ಹೊರಗೆ ಹೋಗಿದ್ದ ಅವರು, ರಾತ್ರಿ 10.40 ರ ಹೊತ್ತಿಗೆ ವಾಪಸ್ ಬರುವಾಗ ಶಿಪ್‌ಲಿಫ್ಟ್ನ ಖಾಲಿ ಸ್ಥಳದಲ್ಲಿ ಸಮುದ್ರಕ್ಕೆ ಬಿದ್ದು ಅಸ್ವಸ್ಥರಾಗಿದ್ದರು.

ಅವರನ್ನು ಸ್ಥಳದಲ್ಲಿದ್ದ ಸಿಬ್ಬಂದಿ ರಕ್ಷಿಸಿ, ನೌಕಾ ಆಸ್ಪತ್ರೆಗೆ ಕರೆದೊಯ್ದಾಗ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net