ಕಲ್ಲೂರಲ್ಲಿ ನವರಾತ್ರಿ ಉತ್ಸವ 15ರಿಂದ

14-KALLUR-1
Published on

ಕಲ್ಲೂರ (ಧಾರವಾಡ ತಾಲೂಕು): ಗ್ರಾಮದ ಉಡಚಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ. 15ರಿಂದ 24ರವರೆಗೆ ಆಚರಿಸಲಾಗುವುದು.

15ರಂದು ಘಟ ಸ್ಥಾಪನೆ ಮಾಡಿ 1001 ದೀಪ ಹಚ್ಚಲಾಗುವುದು. ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಉಡಚಮ್ಮ ದೇವಿಯನ್ನು ದೇವಸ್ಥಾನಕ್ಕೆ ಕರೆತಂದು ಪ್ರತಿಷ್ಠಾಪಿಸಿ, ಮಹಾ ಮಂಗಳಾರತಿ ಮಾಡಿ, ಪ್ರಸಾದ ವಿತರಿಸಲಾಗುವುದು.

22ರಂದು ರಾತ್ರಿ ಭಜನಾ ಸ್ಪರ್ಧೆ, ಡೊಳ್ಳು ಹಾಗೂ ಹೆಜ್ಜೆ ಮಜಲು ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 23ರಂದು ಖಂಡೆ ಪೂಜೆ ನಡೆಯಲಿದೆ. 24ರಂದು ವಿಜಯದಶಮಿ ಹಾಗೂ ಬನ್ನಿ ಮುಡಿಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net