ಶ್ರೀ ಬನಶಂಕರಮ್ಮ ದೇಗುಲದಲ್ಲಿ ನವರಾತ್ರಿ ಪೂಜೆ

dasara palace cultural program
Published on

ಆಲೂರು : ಸಮೀಪದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ತಾಲೂಕಿನ ಮಗ್ಗೆ ರಾಯರಕೊಪ್ಪಲು ರಸ್ತೆಯಲ್ಲಿರುವ ವೈ.ಎನ್.ಪುರದ ಶ್ರೀ ಬನಶಂಕರಮ್ಮ ದೇವಸ್ಥಾನದಲ್ಲಿ ಗುರುವಾರ ದಸರಾ ಹಬ್ಬದ ಸಂಪ್ರದಾಯದಂತೆ ನವರಾತ್ರಿ ಆಚರಣೆಯ ಕಾರ್ಯಕ್ರಮಗಳು ಆರಂಭವಾಗಿವೆ.


ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಮಹಾಭಿಷೇಕ, ಹೂವಿನ ಅಲಂಕಾರ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ದೇವಿಯ ಗರ್ಭಗೃಹದಲ್ಲಿ ನವರಾತ್ರಿ ಉತ್ಸವದ ಘಟಸ್ಥಾಪನೆ ಮಾಡಲಾಯಿತು.


ಅ.12 ರ ವರೆಗೆ ಪ್ರತಿದಿನ ದೇವಿಗೆ ಭಕ್ತರಿಂದ ಶೋಡೋಪಚಾರ ಪೂಜೆ ಸಹಿತ ಸಹಸ್ರ ಕುಂಕುಮಾರ್ಚನೆ, ನೈವೇದ್ಯ, ಮಹಾಮಂಗಳಾರತಿ ಮತ್ತು ಮಂತ್ರಪುಷ್ಪ ಸೇವೆ ಕಾರ್ಯಕ್ರಮಗಳು ನಡೆಯಲಿವೆ.


ಅ.5 ರಂದು ಆಶ್ವಯುಜ ಶುದ್ಧ ತೃತೀಯ ಸಂತಾನ ಲಕ್ಷ್ಮೀ ಅಲಂಕಾರ ಅ.6 ರಂದು ಆಶ್ವಯುಜ ಶುದ್ಧ ಚತುರ್ಥಿ ಹೂವಿನ ಅಲಂಕಾರ, ಅ.7 ರಂದು ಆಶ್ವಯುಜ ಶುದ್ಧ ಪಂಚಮಿ ನವರಂಗಿ ಅಲಂಕಾರ, ಅ.8 ಆಶ್ವಯುಜ ಶುದ್ಧ ಷಷ್ಠಿ ಅರಿಶಿಣ- ಕುಂಕುಮ ಅಲಂಕಾರ, ಅ.9 ರಂದು ಆಶ್ವಯುಜ ಶುದ್ಧ ಸಪ್ತಮಿ ಸರಸ್ವತಿ ಅಲಂಕಾರ, ಅ.10 ರಂದು ಆಶ್ವಯುಜ ಶುದ್ಧ ಅಷ್ಟಮಿದುರ್ಗಾ ಅಲಂಕಾರ, ಅ.11 ರಂದು ಅಶ್ವಯುಜ ಶುದ್ಧ ನವಮಿ ಬಳೇಯ ಅಲಂಕಾರ, ಅ.12 ರಂದು ದೇವಸ್ಥಾನದ ಆವರಣದಲ್ಲಿ ಅಶ್ವಯುಜ ಶುದ್ಧ ದಶಮಿ (ಬನ್ನಿಗಿಡ) ಕಾರ್ಯಕ್ರಮ ಜರುಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net