

ಧಾರವಾಡ: ನಗರದ ಗೌಳಿಗಲ್ಲಿ ಶೀಲವಂತರ ಓಣಿ ಮುಖ್ಯ ರಸ್ತೆಯ ಶ್ರೀ ರೇಣುಕಾ ಮಂದಿರದಲ್ಲಿ ಅ. 15ರಿಂದ 24ರವರೆಗೆ ನವರಾತ್ರಿ ಮಹೋತ್ಸವ ಜರುಗಲಿದೆ. 15ರಂದು ಬೆಳಗ್ಗೆ 6ರಿಂದ 7.30ರವರೆಗೆ ಗಣಪತಿ ಪೂಜೆ, ರೇಣುಕಾ ದೇವಿಗೆ ಪಂಚಾಮೃತ ಅಭಿಷೇಕ ಜರುಗಲಿದೆ. 8ರಿಂದಗೆ 12ರವರೆಗೆ ದುರ್ಗಾ ಹೋಮ, ರಾತ್ರಿ 7.30ಕ್ಕೆ ಘಟಸ್ಥಾಪನೆ ಮಾಡಲಾಗುವುದು. ರಾತ್ರಿ 8 ಗಂಟೆಗೆ ಅನ್ನ ಸಂತರ್ಪಣೆ ಇರಲಿದೆ.
16ರಿಂದ 21ರವೆರೆಗೆ ಕುಂಕುಮಾರ್ಚನೆ, ನವಗ್ರಹ ಆರಾಧನೆ, ಲಕ್ಷ್ಮೀ ಪೂಜೆ, ಅಷ್ಟೋತ್ತರ ಪೂಜೆ, ಹೂವಿನ ಪೂಜೆ, ಸರಸ್ವತಿ ಪೂಜೆ ನಡೆಯಲಿವೆ. 22ರಂದು ದುರ್ಗಾಷ್ಟಮಿ ಪೂಜೆ ನೆರವೇರಿಸಲಾಗುವುದು. ನಂತರ ಮಹಿಳೆಯರಿಗೆ ಉಡಿ ತುಂಬಲಗುವುದು. 23ರಂದು ಮಹಾನವಮಿ, 24ರಂದು ವಿಜಯದಶಮಿಯ ವಿಶೇಷ ಪೂಜೆ ಇರಲಿದೆ ಎಂದು ದೇವಸ್ಥಾನದ ಶ್ರೀ ಮೌನೇಶ ಮಡೆಸೂರ ತಿಳಿಸಿದ್ದಾರೆ.