ನವರಾತ್ರಿ ಉತ್ಸವ ಉಡಿ ತುಂಬುವ ಕಾರ್ಯಕ್ರಮ

Navratri festival Udi filling program
Published on

ವಿಜಯಪುರ: ನವರಾತ್ರಿ ಉತ್ಸವದ ಅಂಗವಾಗಿ ನಗರದ ಸಾಯಿ ಪಾರ್ಕಿನಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರವಿವಾರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.ದೇವಸ್ಥಾನದಲ್ಲಿ ಪ್ರತಿನಿತ್ಯ ಕುಂಕುಮಾರ್ಚನೆ, ಪುಷ್ಪಾರ್ಚನೆ, ಬಿಲ್ವಾರ್ಚನೆ, ನೈವೇದ್ಯ ಅರ್ಪಣೆ ಕಾರ್ಯಗಳು ನಡೆಯುತ್ತಿವೆ. ದೇವಿ ಮೂರ್ತಿಗೆ ವಿವಿಧ ಹೂವಿನ ಅಲಂಕಾರವನ್ನು ಮಾಡಲಾಗುತ್ತಿದೆ. ರವಿವಾರ ಮಹಾಲಕ್ಷ್ಮಿ ಮೂರ್ತಿಗೆ ವಿಶೇಷವಾಗಿ ಸಿಂಗರಿಸಿ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ನವರಾತ್ರಿ ಉತ್ಸವದ ನಿಮಿತ್ಯವಾಗಿ 9 ದಿನಗಳ ಕಾಲ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಪ್ರಸಾದರ ವ್ಯವಸ್ಥೆಯು ಮಾಡಲಾಯಿತು

ಉಡಿ ತುಂಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೈಲಜಾ ಬಸನಗೌಡ ಪಾಟೀಲ್ ಯತ್ನಾಳ ಮಾಣಿಕ್ಯ ಚಿಕ್ಕಮಠ

ರಾಜಶ್ರೀ ಹಿರೇಮಠ,ಅನಿತಾ ದಡ್ಡಿ ಆಶಾ ಬಡಿಗೇರ,ಸುಕನ್ಯ ಕುಂಚನೂರು ಸೇರಿದಂತೆ ಸಾಯಿ ಪಾರ್ಕ್ ಮಹಿಳೆಯರು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net