ದಾಂಡೇಲಿಯಲ್ಲಿ ನವರಾತ್ರಿ ಉತ್ಸವ ಅ. 3ರಿಂದ

SUNIL HEGDE
Published on

ದಾಂಡೇಲಿ: ದಾಂಡೇಲಿ ನವರಾತ್ರಿ ಉತ್ಸವ ಸಮಿತಿ ಆಶ್ರಯದಲ್ಲಿ ಮೂರನೇ ವರ್ಷದ ನವರಾತ್ರಿ ಉತ್ಸವವನ್ನು ನಗರದ ಹಳೇ ನಗರ ಸಭೆ ಮೈದಾನದಲ್ಲಿ ಅ. 3ರಿಂದ 11ರವರೆಗೆ ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಶಾಸಕ, ಸಮಿತಿ ಗೌರವಾಧ್ಯಕ್ಷ ಸುನೀಲ ಹೆಗಡೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 3ರಂದು ಬೆಳಗ್ಗೆ 11 ಗಂಟೆಗೆ ಕೋಲ್ಕತಾದಲ್ಲಿ ನಿರ್ವಿುಸಿ ತರಲಾದ 10 ಅಡಿ ಎತ್ತರದ ಮಣ್ಣಿನ ದುರ್ಗಾದೇವಿ ಮೂತಿಯನ್ನು ಪ್ರತಿಷ್ಠಾಪಿಸಲಾಗುವುದು. ಅ. 10ರಂದು ಸಂಜೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಅ. 11ರಂದು ಮಧ್ಯಾಹ್ನ ದುರ್ಗಾದೇವಿ ಮೂರ್ತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ಒಯ್ದು ಕಾಳಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದರು.

ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಟಿ.ಎಸ್. ಬಾಲಮಣಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚವ್ಹಾಣ, ಬುದವಂತಗೌಡ ಪಾಟೀಲ, ಗುರು ಮಠಪತಿ, ರೋಶನ್ ನೇತ್ರಾವಳಿ, ಸುಧಾಕರ ಶೆಟ್ಟಿ, ರವಿ ಗಾಂವಕರ, ಮಿಥುನ ನಾಯಕ, ರವಿಕುಮಾರ ಜಿ. ನಾಯಕ, ಮುಸ್ತಾಕ್ ಶೇಖ್, ಪ್ರಶಾಂತ ಬೂರ್ತೆಕರ, ವಿನೋದ ಬಾಂದೇಕರ, ಮುರಳಿ ನಾಯ್ಕ, ರೂಪೇಶ ಪವಾರ, ಗೀತಾ ಶಿಕಾರಿಪುರ, ಅಶ್ವಿನಿ ಬಾಲಮಣಿ, ರಮಾ ರವೀಂದ್ರ, ಪದ್ಮಜಾ ಪ್ರವೀಣ ಜನ್ನು, ಅನ್ನಪೂರ್ಣ ಬಾಗಲಕೋಟೆ, ಪದ್ಮಾ ಕುರ್ಡೆಕರ, ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net