ಲೋಕಾಪುರದಲ್ಲಿ ನಾಳೆಯಿಂದ ನವರಾತ್ರಿ ಉತ್ಸವ

Navratri festival begins in Lokapura tomorrow
Published on

ಲೋಕಾಪುರ : ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಸೆ.22 ರಿಂದ ನವರಾತ್ರಿ ಉತ್ಸವ ಪ್ರಾರಂಭವಾಗುವುದು. ನವರಾತ್ರಿ ಉತ್ಸವದ ಪ್ರಯುಕ್ತ ಟಸ್ಥಾಪನೆ, ವೆಂಕಟೇಶ್ವರ ಮಹಾತ್ಮೆ ಪುರಾಣ ಪ್ರವಚನವನ್ನು ಸಾಂಪ್ರದಾಯಿಕವಾಗಿ ಪ್ರಾರಂಭಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು.

ಪ್ರತಿ ದಿನ ಸಂಜೆ 6 ಗಂಟೆಗೆ ನಿವೃತ್ತ ಶಿಕ ಗುರುರಾಜ ಆಚಾರ್ಯ ಜೋಶಿ ಅವರಿಂದ ವೆಂಕಟೇಶ್ವರ ಮಹಾತ್ಮೆ ಪುರಾಣ ಹಾಗೂ ಅರ್ಚಕ ಬಿ.ಎಲ್​.ಬಬಲಾದಿ, ಪಂ.ರಾವೇಂದ್ರಚಾರ್ಯ ಬಬಲಾದಿ ಮತ್ತು ರಾವೇಂದ್ರ ಸ್ವಾಮಿಗಳ ಮಠದ ಅರ್ಚಕ ಆನಂದಚಾರ್ಯ ಜಂಬಗಿ ಅವರ ಸಾನ್ನಿಧ್ಯದಲ್ಲಿ ವೆಂಕಟೇಶ್ವರನಿಗೆ ಅಭಿಷೇಕ, ಅಲಂಕಾರದೊಂದಿಗೆ ಟಸ್ಥಾಪನೆ ನೆರವೇರಿಸಲಾಗುತ್ತದೆ.

ಪ್ರತಿ ದಿವಸ ಮಹಿಳೆಯರಿಂದ ಕೋಲಾಟ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಾಹನೋತ್ಸವ, ಸಂಗೀತ ಕಾರ್ಯಕ್ರಮ ನಡೆಯಲಿವೆ. ಸೆ.30 ರಂದು ದುರ್ಗಾಷ್ಟಮಿ ಹಾಗೂ ಅ.1 ರಂದು ಖಂಡೆ ಪೂಜೆ, ಆಯುಧ, ಪೂಜೆ ಅ.2 ರಂದು ವಿಜಯದಶಮಿ ರಥೋತ್ಸವ ಜರುಗುವುದು. ನಂತರ ಅನ್ನಸಂತರ್ಪಣೆ, ಸಂಜೆ ಮದ್ದು ಸುಡುವ ಕಾರ್ಯಕ್ರಮ ಹಾಗೂ ಬನ್ನಿ ಮುಡಿಯುವುದು, ಸಂಜೆ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ.

ಲೋಕಾಪುರ ವೆಂಕಟೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net