

ಕುಂಬಳೆ: ಆರಿಕ್ಕಾಡಿ ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೋಮವಾರ ಆರಂಭಗೊಂಡಿದ್ದು, ಅ.2ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೋಮವಾರ ಬೆಳಗ್ಗೆ ಕ್ಷೇತ್ರದಲ್ಲಿ ಶ್ರೀಗುರು ಮಹಾಗಣಪತಿ ಪೂಜೆ, ಸ್ವಸ್ತಿಪುಣ್ಯಾಹ, ನವಗ್ರಹಪೂಜೆ, ಕಲಶ ಪ್ರತಿಷ್ಠಾಪನೆ, ಶ್ರೀ ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ಮಹಾಭಿಷೇಕ ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ದೀಪಾರಾಧನೆ, ವೇದಸೂಕ್ತ ಪಾರಾಯಣ, ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಸೆ.23ರಂದು ಬೆಳಗ್ಗೆ 9ರಿಂದ 10ರ ತನಕ ಆರಿಕ್ಕಾಡಿ ಶ್ರೀ ಹನುಮ ಭಕ್ತ ಭಜನಾ ಸಂಘ, 11ರಿಂದ 12ರ ತನಕ ಆರಿಕ್ಕಾಡಿ ಶ್ರೀಕಾಳಿಕಾಂಬ ಮಹಿಳಾ ಭಜನಾ ಸಂಘ, ಸಂಜೆ 6.30ರಿಂದ 8ರ ತನಕ ಆರಿಕ್ಕಾಡಿ ಶ್ರೀಕಾಳಿಕಾಂಬ ಭಜನಾ ಸಂಘದಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ.